ಬೆಂಗಳೂರು: ‘ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿ.ವೈ.ವಿಜಯೇಂದ್ರ ತಂಡದ ನೇತೃತ್ವದಲ್ಲೇ ಎದುರಿಸಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸೋಣ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದರು.

ಗುರುವಾರ ಇಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ‘ವಿಧಾನಮಂಡಲದಲ್ಲಿ ಆರ್.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಭ್ರಷ್ಟ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಿದ್ದಾರೆ. ಹೊರಗೆ ವಿಜಯೇಂದ್ರ ಹೋರಾಟಗಳನ್ನು ಸಂಘಟಿಸಿದ್ದಾರೆ. ಆದ್ದರಿಂದ ಈ ಮೂವರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ, ಅವರು ವೇದಿಕೆಯಲ್ಲಿದ್ದ ನಾಯಕರು ಮತ್ತು ಸಭಾಂಗಣದಲ್ಲಿದ್ದ ಪ್ರತಿನಿಧಿಗಳಿಗೆ ಎದ್ದು ನಿಲ್ಲುವಂತೆ ಹೇಳಿ ಚಪ್ಪಾಳೆ ಹೊಡೆಸಿದರು.

ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ಕಂಟಕಪ್ರಾಯವಾಗಿ ಪರಿಣಮಿಸಿದೆ. ಮುಖ್ಯಮಂತ್ರಿಯಿಂದ ಹಿಡಿದು ಬಹುಪಾಲು ಸಚಿವರು ಹಲವು ಬಗೆಯ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ವಿರುದ್ಧ ಸಂಘರ್ಷ ಇನ್ನಷ್ಟು ತೀವ್ರಗೊಳಿಸಬೇಕು. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಸಣ್ಣ ಮತ್ತು ದೊಡ್ಡ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮುಸ್ಲಿಂ ಓಲೈಕೆ, ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಜನರ ಗಮನಕ್ಕೆ ತರಬೇಕು. ಬೀದಿಯಲ್ಲಿ ಸಂಘರ್ಷಕ್ಕೆ ಸಂಘಟಿತರಾಗಬೇಕು ಎಂದು ಅಗರ್ವಾಲ್ ಸೂಚಿಸಿದರು.

ರಾಜ್ಯ ಸರ್ಕಾರ ಸಿದ್ಧಪಡಿಸಿರುವ ರೋಹಿತ್ ವೇಮುಲ ಮಸೂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಮಾತ್ರ ಇರಬೇಕಿತ್ತು. ಅದರಲ್ಲಿ ಮುಸ್ಲಿಮರನ್ನು ಸೇರಿಸಿದ್ದು ಏಕೆ? ಈ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಅವರು ಆಕ್ಷೇಪಿಸಿದರು.

‘ಒಂದು ಕಡೆ ಕಾಂಗ್ರೆಸ್, ಆರ್ಎಸ್ಎಸ್ ಅನ್ನು ನಿಷೇಧಿಸುವ ಮಾತನಾಡುತ್ತದೆ. ಮತ್ತೊಂದು ಕಡೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗು ಹಾಕುವವರನ್ನು ರಕ್ಷಿಸುತ್ತದೆ’ ಎಂದು ಅವರು ದೂಷಿಸಿದರು.

ರಾಜಕೀಯದಲ್ಲಿ 50 ವಸಂತ ಪೂರೈಸಿದ ಬಿಎಸ್ವೈ

50 ವರ್ಷಗಳ ರಾಜಕೀಯ ಜೀವನ ಪೂರ್ಣಗೊಳಿಸಿದ್ದಕ್ಕಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ‘ನನಗೆ ಈಗ 83 ವರ್ಷ ವಯಸ್ಸಾಗಿದೆ. ಇನ್ನೂ 5–6 ವರ್ಷ ಗಟ್ಟಿಯಾಗಿರುತ್ತೇನೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಎಲ್ಲಿ ಕರೆದರೂ ಬರುತ್ತೇನೆ. ಒಟ್ಟಾಗಿ ಸೇರಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯೋಣ’ ಎಂದು ಯಡಿಯೂರಪ್ಪ ಹೇಳಿದರು. ಇದೇ ವೇಳೆ ಯಡಿಯೂರಪ್ಪ ಅವರ ಹೋರಾಟದ ಹಾದಿಯ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ‘ಅನಂತಕುಮಾರ್ ಬಿ.ಬಿ.ಶಿವಪ್ಪ ಎ.ಕೆ.ಸುಬ್ಬಯ್ಯ ವಸಂತ ಬಂಗೇರ ಎಂ.ಆರ್.ತಂಗಾ ಬಸವರಾಜ ಪಾಟೀಲ ಸೇಡಂ ಡಿ.ಎಚ್.ಶಂಕರಮೂರ್ತಿ ಕೃ.ನರಹರಿ ರಾಮಚಂದ್ರಗೌಡ ಅವರು ಸಹಕಾರ ನೀಡಿದ್ದರು. ಆರ್ಎಸ್ಎಸ್ ನನಗೆ ಮಾರ್ಗದರ್ಶನ ನೀಡಿತ್ತು’ ಎಂದು ಯಡಿಯೂರಪ್ಪ ಹೇಳಿದರು. ಅನಂತಕುಮಾರ್ ಅವರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದ್ದೂ ಅಲ್ಲದೇ ಒಂದು ಕ್ಷಣ ಭಾವಾವೇಶಕ್ಕೆ ಒಳಗಾದರು. ‘ಇವರು ಹಗಲು– ರಾತ್ರಿ ಎನ್ನದೇ ಕೆಲಸ ಮಾಡಿದ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.