ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂವರೆ ವರ್ಷದ ಬಳಿಕ ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಬದಲಾವಣೆ: ವಿನಯ ಕುಲಕರ್ಣಿ

ವಿಜಯಪುರದಲ್ಲಿ ಹೇಳಿಕೆ
Published 19 ಆಗಸ್ಟ್ 2023, 14:48 IST
Last Updated 19 ಆಗಸ್ಟ್ 2023, 14:48 IST
ಅಕ್ಷರ ಗಾತ್ರ

ವಿಜಯಪುರ: ‘ಮುಂದಿನ ಎರಡೂವರೆ ವರ್ಷದ ಬಳಿಕ ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ’ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ತಿಳಿಸಿದರು.

‘ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ಬಿಟ್ಟುಕೊಡೋಣ. ಹೊಸಬರಿಗೆ ಅವಕಾಶ ನೀಡೋಣ ಎಂದು ಸಚಿವ ಮುನಿಯಪ್ಪ ಅವರು ಹೇಳಿದ್ದು ಸಂತಸ ತರಿಸಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ನಿಗಮ ಮಂಡಳಿಗಳಿಗೆ 30 ಶಾಸಕರಂತೆ ಎರಡು ಬಾರಿ ಬದಲಾವಣೆ ಮಾಡಿದಂತೆ ಎರಡು ಬಾರಿ ಸಚಿವರು ಬದಲಾವಣೆಯಾದರೆ, ನಮ್ಮ ಎಲ್ಲ ಶಾಸಕರಿಗೂ ಅಧಿಕಾರ ದೊರಕುತ್ತದೆ. ಸಂಪೂರ್ಣ ತಂಡ ಬದಲಾಗಬೇಕು. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.

‘ಬಿಜೆಪಿ ವಲಯದಲ್ಲಿ ಹಲವು ಹಾಲಿ ಮತ್ತು ಮಾಜಿ ಶಾಸಕರಿಗೆ ಅಸಮಾಧಾನವಿದೆ. ಕಳೆದ ಬಾರಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಾಧ್ಯತೆಯಿದೆ. 13 ರಿಂದ 14 ಮಾಜಿ ಶಾಸಕರು ಬರುವ ನಿರೀಕ್ಷೆ ಇದೆ. ಆದರೆ, ಹಾಲಿ ಶಾಸಕರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT