ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಗಾಳಿ ವೇಗ; ಪವನ ವಿದ್ಯುತ್ ಯಂತ್ರಗಳು ಸ್ಥಗಿತ

Last Updated 18 ಜುಲೈ 2018, 16:51 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಪವನ ವಿದ್ಯುತ್ ಸ್ಥಾವರದ ಗಾಳಿ ಯಂತ್ರವೊಂದರ ಎರಡು ರೆಕ್ಕೆಗಳು ತುಂಡು ತುಂಡಾಗಿ ನೆಲಕ್ಕೆ ಉರುಳಿದ ಬೆನ್ನಲೇ ಕೆಲ ಖಾಸಗಿ ಕಂಪನಿಗಳು ವೇಗವಾಗಿ ಗಾಳಿ ಬೀಸಿದರೆ ಯಂತ್ರಗಳನ್ನು ನಿಲ್ಲಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಲ್ಲೂಕಿನ ಕುರುಮರಡಿಕೆರೆ ಗ್ರಾಮ ಸಮೀಪದ ಬೆಟ್ಟದಲ್ಲಿ ಸೋಮವಾರ ವೇಗವಾಗಿ ಬೀಸಿದ ಗಾಳಿಗೆ ಗಾಳಿ ಯಂತ್ರವೊಂದರ ರೆಕ್ಕೆಗಳು ಬೀಳುವ ದೃಶ್ಯ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಸಂಬಂಧಪಟ್ಟ ಖಾಸಗಿ ಕಂಪನಿಗಳು ತಮ್ಮಸಿಬ್ಬಂದಿಗೆ ಗಾಳಿ ಹೆಚ್ಚಾದರೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ತಿಳಿಸಿದ್ದಾರೆ.

‘ಮೊದಲು ಒಂದು ರೆಕ್ಕೆ ತುಂಡಾಗಿದ್ದು, ಅದು ಇನ್ನೊಂದರ ಮೇಲೆ ಬಿದ್ದ ಕಾರಣ ತುಂಡು ತುಂಡಾಗಿ ಬಿದ್ದಿರುವುದನ್ನು ನಾನು ವಿಡಿಯೊದಲ್ಲಿ ಗಮನಿಸಿದ್ದೇನೆ. 10 ದಿನಗಳಿಂದಲೂ ಜಿಲ್ಲೆಯ ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ಗಾಳಿಯ ಪ್ರಮಾಣ ಹೆಚ್ಚಿದೆ. ಪ್ರಕೃತಿ ವಿಕೋಪವೇ ಇದಕ್ಕೆ ಕಾರಣ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT