ಧಮ್ಕಿ ಹಾಕ್ತಿಯೇನೊ ಆಚೆ ಬಾ...
ಬಿಜೆಪಿಯ ಭರತ್ ಶೆಟ್ಟಿ ಅವರು ಮುಖ್ಯಮಂತ್ರಿ ಕಡೆ ಕೈತೋರಿಸಿ ‘ಸರಿಯಾದ ಉತ್ತರ ನೀಡಿ’ ಎಂದಿದ್ದನ್ನು ಕೇಳಿ ಕಾಂಗ್ರೆಸ್‌ನ ನರೇಂದ್ರಸ್ವಾಮಿ ಅವರು ಭರತ್ ಶೆಟ್ಟಿ ವಿರುದ್ಧ ಗರಂ ಆದರು. ಆಗ ಮಧ್ಯ ಪ್ರವೇಶಿಸಿದ ಬೈರತಿ ಬಸವರಾಜ ಅವರು, ‘ಎಲ್ಲದಕ್ಕೂ ಮೂಗು ತೂರಿಸಬೇಡ’ ಎಂದು ನರೇಂದ್ರ ಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು. ‘ಕೈ ತೋರಿಸಿ ಮಾತನಾಡುವುದೇನು? ಗೂಂಡಾಗಿರಿ ಮಾಡ್ತೀರಾ ನಾನು ತೋರಿಸುತ್ತೇನೆ’ ಎಂದು ನರೇಂದ್ರ ಸ್ವಾಮಿ ಹೇಳಿದರು. ಆಗ ಸಿಟ್ಟಾದ ಬೈರತಿ ಬಸವರಾಜ, ‘ಏನ್ ಧಮ್ಕಿ ಹಾಕ್ತಿಯೇನೊ ಆಚೆ ಬಾ...’ ಎಂದು ನರೇಂದ್ರ ಸ್ವಾಮಿಗೆ ಸವಾಲು ಹಾಕಿದರು.