ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ: ₹ 7.92 ಕೋಟಿ ಮೌಲ್ಯದ ಸ್ವತ್ತು ವಶ

Published 4 ಮೇ 2023, 19:11 IST
Last Updated 4 ಮೇ 2023, 19:11 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಅಕ್ರಮ ತಡೆಗೆ ರಾಜ್ಯದ ವಿವಿಧೆಡೆ ಗುರುವಾರ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 83.41 ಲಕ್ಷ ನಗದು ಸೇರಿದಂತೆ ₹ 7.92 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

‘₹ 2.63 ಕೋಟಿ ಮೌಲ್ಯದ 91,054 ಲೀಟರ್‌ ಮದ್ಯ, ₹ 48.11 ಲಕ್ಷ ಮೌಲ್ಯದ 95.54 ಕೆ.ಜಿ. ಮಾದಕವಸ್ತು, ₹ 2.76 ಕೋಟಿ ಮೌಲ್ಯದ 5.55 ಕೆ.ಜಿ. ಚಿನ್ನ, ₹ 1.21 ಕೋಟಿ ಮೌಲ್ಯದ ಉಚಿತ ಕೊಡುಗೆಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಮಂಗಳವಾರದವರೆಗೆ ಒಟ್ಟು ₹ 331.01 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಅಕ್ರಮ ಆರೋಪದಡಿ 2,602 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಆರೋಪದಡಿ 31,183 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮನೆಯಿಂದ ಮತ, ಶೇ 87.92 ಚಲಾವಣೆ:

ರಾಜ್ಯದ 80 ವರ್ಷ ಮೇಲ್ಪಟ್ಟ 80,250 ಮತದಾರರಲ್ಲಿ ಶೇ 87.90 ಹಾಗೂ 19,279 ಅಂಗವಿಕಲರಲ್ಲಿ ಶೇ 87.98 ಮತದಾರರು ಗುರುವಾರದವರೆಗೆ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ಒಟ್ಟು ಪ್ರಮಾಣ ಶೇ.87.92 ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT