ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥನೆ ನೀಡಿದರೆ ಶಿಸ್ತುಕ್ರಮ: ಕೋಳಿವಾಡ

Last Updated 30 ಜೂನ್ 2021, 21:37 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಸ್ತು ಸಮಿತಿ ಸಭೆ ನಡೆಸಿ, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಬಳಿಕ ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಯಾರೂ ಮಾತನಾಡಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಬಿ. ಕೋಳಿವಾಡ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಈ ರೀತಿ ಹೇಳಿಕೆ ನೀಡಿದವರನ್ನು ಮುಂದಿನ ಸಭೆಗೆ ಕರೆಸುತ್ತೇವೆ. ತಪ್ಪು ಒಪ್ಪಿಕೊಂಡರೆ ಅಲ್ಲಿಗೆ ಮುಗಿಸುತ್ತೇವೆ. ಸಮರ್ಥನೆ ಮಾಡಿಕೊಂಡರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಮಾನತು ಮಾಡುವ ಅಧಿ ಕಾರವೂ ಸಮಿತಿಗಿದೆ’ ಎಂದರು.

‘ಮುಖ್ಯಮಂತ್ರಿ ಆಗುವ ಸಾಮರ್ಥ್ಯ ಇರುವ ಹತ್ತಕ್ಕೂ ಹೆಚ್ಚು ಹಿರಿಯ ನಾಯಕರು ಪಕ್ಷದಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವ ಕುಮಾರ್‌ ಒಂದಾಗಿ ಹೋದರೆ ನಾವು (ಕಾಂಗ್ರೆಸ್‌) ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸೇರಿದವರು ಕಾಂಗ್ರೆಸ್ಸಿ ಗರು. ವಲಸಿಗ, ಮೂಲ ಎನ್ನುವುದು ಇಲ್ಲ. ದಲಿತ ಮುಖ್ಯಮಂತ್ರಿ ಕೂಗು ಸದ್ಯಕ್ಕೆ ಅಪ್ರಸ್ತುತ. ಕೆ.ಎಚ್‌. ಮುನಿಯಪ್ಪ, ಜಿ. ಪರಮೇಶ್ವರ ಪಕ್ಷದ ನಿಷ್ಠರು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ‌ನಿರ್ಣಯ ತೆಗೆದುಕೊಳ್ಳುತ್ತದೆ’ ಎಂ‌ದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT