ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ: ರ್‍ಯಾಂಕ್‌ ಬದಲು ಗ್ರೇಡಿಂಗ್‌ ಪದ್ಧತಿ?

ಪ್ರೊ. ಎಸ್‌.ಎಂ. ಜಯಕರ ಸಮಿತಿ ಶಿಫಾರಸು ಪರಿಗಣಿಸಲು ಚಿಂತನೆ: ಸಚಿವ ಸುಧಾಕರ್
Published 19 ಫೆಬ್ರುವರಿ 2024, 20:24 IST
Last Updated 19 ಫೆಬ್ರುವರಿ 2024, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಪರೀಕ್ಷಾ ಪದ್ಧತಿಯಲ್ಲಿ ಇರುವ ಅಂಕಗಳ ನೀಡುವಿಕೆ, ರ್‍ಯಾಂಕ್‌ ವ್ಯವಸ್ಥೆ ಕೈಬಿಟ್ಟು, ಸರಾಸರಿ ಅಂಕಗಳ ಆಧಾರದಲ್ಲಿ ಗ್ರೇಡಿಂಗ್‌ ಪದ್ಧತಿ ಪರಿಚಯಿಸುವಂತೆ ಪ್ರೊ. ಎಸ್‌.ಎಂ. ಜಯಕರ ಸಮಿತಿ ನೀಡಿದ್ದ ಶಿಫಾರಸು ಪರಿಗಣಿಸಲು ಚಿಂತನೆ ನಡೆದಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ತಜ್ಞರ ಸಮಿತಿಯ ವರದಿ ಸರ್ಕಾರದ ಮುಂದಿದ್ದು, ಪರಿಶೀಲನೆಯಲ್ಲಿದೆ’ ಎಂದರು.

‘ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಇತ್ತೀಚೆಗೆ ವರದಿಯಾದ ಆತ್ಮಹತ್ಯೆ ಘಟನೆ ಬಳಿಕ ಉನ್ನತ ಶಿಕ್ಷಣ ಇಲಾಖೆ ರಚಿಸಿದ್ದ ಸಮಿತಿಯು ಅಲ್ಲಿಗೆ ಭೇಟಿ ನೀಡಿ ಅಧ್ಯಯನ‌ ನಡೆಸಿ ವರದಿ ಸಲ್ಲಿಸಿದೆ. ಈ ಸಮಿತಿಯ ಶಿಫಾರಸನ್ನು ಪರಿಗಣಿಸುವ ಕುರಿತು ಉನ್ನತ ಶಿಕ್ಷಣ ಪರಿಷತ್‌ ಚರ್ಚೆ ನಡೆಸುತ್ತಿದೆ’ ಎಂದರು.

‘ಗ್ರೇಡಿಂಗ್‌ ಪದ್ಧತಿ ಅಳವಡಿಸುವ ಬಗ್ಗೆ ಚರ್ಚಿಸಲು ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು’ ಎಂದ ಸಚಿವರು, ‘ರಾಜ್ಯದಲ್ಲಿ 30ಕ್ಕೂ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳಿವೆ. ಇವುಗಳಿಂದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಧಕ್ಕೆ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕ ವಿಶ್ವವಿದ್ಯಾಲಯಗಳ ಹೆಸರು ದುರ್ಬಳಕೆ ಮಾಡಿಕೊಂಡು ಗೌರವ ಡಾಕ್ಟರೇಟ್ ನೀಡುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ‌‘ಕೆಲವು ನಕಲಿ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡುತ್ತಿವೆ. ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯದ ಹೆಸರಿನಲ್ಲಿ ಗೌರವ ಡಾಕ್ಟರೇಟ್ ನೀಡಿದ ಪ್ರಕರಣವನ್ನು ನಾವು ಪತ್ತೆ ಮಾಡಿದ್ದೇವೆ. ಅಂತಹ ಘಟನೆಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT