ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಕುಡಿಯುವ ನೀರು: ಅಗತ್ಯದ ಹಣ ಬಿಡುಗಡೆಗೆ ಸಿಎಂ ಸೂಚನೆ

Published 3 ನವೆಂಬರ್ 2023, 5:41 IST
Last Updated 3 ನವೆಂಬರ್ 2023, 5:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ತಕ್ಷಣ ಅಗತ್ಯವಿದ್ದಷ್ಟು ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸ್ಪಷ್ಟ ಸೂಚನೆ ನೀಡಿದರು.

ಬರಗಾಲ ಮತ್ತು ಪರಿಣಾಮಗಳ ಬಗ್ಗೆ ತೀವ್ರ ನಿಗಾ ಇಡಬೇಕು. ನರೇಗಾ ಹಣ ಬಿಡುಗಡೆ ತಡವಾದರೂ ನಮ್ಮಂದಲೇ ಹಣ ಬಿಡುಗಡೆ ಮಾಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಡ ಮಾಡಬಾರದು ಎನ್ನುವ ಸೂಚನೆಗಳನ್ನು ಅವರು ಶುಕ್ರವಾರ ಬೆಳಿಗ್ಗೆ ನೀಡಿದ್ದಾರೆ.

ಸಚಿವರಾದ ಬೈರತಿ ಸುರೇಶ್, ಶಿವರಾಜ ತಂಗಡಗಿ, ಶಾಸಕರಾದ ಎಚ್. ಆರ್. ಗವಿಯಪ್ಪ, ಡಾ.ಶ್ರೀನಿವಾಸ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗದಗದತ್ತ ತೆರಳಿದ ಸಿಎಂ

ಕರ್ನಾಟಕ ವೈಭವ- 50 ಜ್ಯೋತಿ ರಥಯಾತ್ರೆಗೆ ಗುರುವಾರ ಸಂಜೆ ಹಂಪಿಯಲ್ಲಿ ಚಾಲನೆ ನೀಡಿ, ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ ನಲ್ಲಿ ತಂಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಸ್ತೆ ಮೂಲಕ ಗದಗದತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT