ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನುಶ್ರೀಗೆ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಗರಿ

Last Updated 23 ಫೆಬ್ರುವರಿ 2019, 19:47 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಸೇಂಟ್‌ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಿಮಿಷಕ್ಕೆ 62 ಬಾರಿ ‘ಧನುರಾಸನ’ ಮಾಡಿ, ಅತಿ ವೇಗವಾಗಿ 100 ಬಾರಿ ಧನುರಾಸನ ಹಾಕಿ ಮೂಲಕ ಬಾಲಕಿ 10 ವರ್ಷದ ತನುಶ್ರೀ ಪಿತ್ರೋಡಿ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದಳು.

ದೇಹವನ್ನು ತಿರುಗಿಸುತ್ತಾ ಒಂದಾದ ಮೇಲೊಂದರಂತೆ ಆಸನ ಹಾಕುತ್ತಾ ಸಾಗಿದ ಪೋರಿ ವಿಶ್ವದಾಖಲೆಯ ಸಾಧನೆ ಮಾಡಿದಳು.

ಈ ಸಂದರ್ಭ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಮನೀಷ್‌ ಬಿಷ್ಣೋಯಿ ಮಾತನಾಡಿ, ‘ತನುಶ್ರೀ ಪಿತ್ರೋಡಿ ಹಿಂದೆ 2 ಬಾರಿ ವಿಶ್ವದಾಖಲೆ ಮಾಡಿದ್ದರು. ಇದೀಗ ಮತ್ತೆರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾಳೆ’ ಎಂದು ಘೋಷಿಸಿದರು.

ಬಳಿಕ ತನುಶ್ರೀಗೆ ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸಲಾಯಿತು. ಆಕೆಯ ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT