ಬೆಂಗಳೂರು: ‘ಅನಧಿಕೃತ ಮತ್ತು ವಿವೇಚನಾರಹಿತ ಮರಳು ಗಣಿಗಾರಿಕೆಯ ಪರಿಣಾಮ ರಾಜ್ಯದಲ್ಲಿ ನದಿಗಳು ಮತ್ತು ನದಿ ಪಾತ್ರಗಳು ಬತ್ತಿ ಹೋಗುತ್ತಿದ್ದು, ಎಷ್ಟೋ ಪ್ರಕರಣಗಳಲ್ಲಿ ಸಂಪೂರ್ಣವಾಗಿ ನದಿಗಳೇ ಸತ್ತುಹೋಗಿವೆ. ಇದರಿಂದಾಗಿ, ಸಕಲ ಜೀವರಾಶಿಗೆ ಕುಡಿಯುವ ನೀರಿನ ಪೂರೈಕೆಯೂ ದುಸ್ತರವಾಗಿದ್ದು, ಭವಿಷ್ಯದಲ್ಲಿ ಇದರ ದುಷ್ಪರಿಣಾಮ ತಾರಕಕ್ಕೇರುವ ಅಪಾಯವಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಯಾವುದೇ ಅನುಮತಿಯಿಲ್ಲದೆ ಟಕ್ಕಳಕಿ ಗ್ರಾಮದ ಸರ್ವೇ ನಂಬರ್ 118/1ರಲ್ಲಿ 2,904 ಮೆಟ್ರಿಕ್ ಟನ್ ಮರಳನ್ನು ದಾಸ್ತಾನು ಇರಿಸಿಕೊಂಡಿದ್ದೀರಿ. ಈ ಸಂಗ್ರಹಿಸಿದ ಮರಳು ದಾಸ್ತಾನು ಕೃಷ್ಣಾ ನದಿ ಕೊಳ್ಳದಲ್ಲಿ ಗಣಿಗಾರಿಕೆ ಮಾಡಿದ್ದಾಗಿದೆ’ ಎಂದು ಆಕ್ಷೇಪಿಸಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ತಹಶೀಲ್ದಾರ್, ಟಕ್ಕಳಕಿ ನಿವಾಸಿ ಭಗವಂತ ಅಲಗೂರು (65) ಅವರಿಗೆ ನೋಟಿಸ್ ನೀಡಿದ್ದರು.

ಈ ನೋಟಿಸ್ ರದ್ದುಪಡಿಸುವಂತೆ ಕೋರಿ ಭಗವಂತ ಅಲಗೂರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರು ಈ ನೋಟಿಸ್ ಸ್ವೀಕರಿಸಿರುವುದಕ್ಕೆ ಯಾವುದೇ ಸ್ವೀಕೃತಿ ಪತ್ರ ಪಡೆದಿರಲಿಲ್ಲ’ ಎಂಬ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಸಚಿನ್ ಸಿ.ಅಂಗಡಿ ಅವರ ವಾದವನ್ನು ಪರಿಗಣಿಸಿದ್ದು, ತಹಶೀಲ್ದಾರ್ 2022ರ ಮೇ 4ರಂದು ನೀಡಿದ್ದ ನೋಟಿಸ್ ರದ್ದುಪಡಿಸಿದೆ.

‘ಅರ್ಜಿದಾರರಿಗೆ ಹೊಸದಾಗಿ ಅವರ ವಕೀಲರ ಮೂಲಕ ನೋಟಿಸ್ ನೀಡಬೇಕು’ ಎಂದು ಆದೇಶಿಸಿರುವ ನ್ಯಾಯಪೀಠ, ‘ಅರ್ಜಿದಾರರು ಇದೇ 7ರೊಳಗೆ ಈ ಬಗ್ಗೆ ತಹಶೀಲ್ದಾರ್ ಅವರಿಗೆ ಪೂರಕ ದಾಖಲೆಯೊಂದಿಗೆ ಉತ್ತರಿಸಬೇಕು. ಇದನ್ನು ಪರಿಗಣಿಸಿ ತಹಶೀಲ್ದಾರ್ ಕಾನೂನು ಪ್ರಕಾರ ಅಗತ್ಯ ಆದೇಶ ಹೊರಡಿಸಬೇಕು’ ಎಂದು ತಾಕೀತು ಮಾಡಿದೆ. ರಾಜ್ಯ ಸರ್ಕರದ ಪರ ವಿ.ಎಸ್.ಕಳಸೂರು ಮಠ ಹಾಜರಿದ್ದರು.

‘ಗಣಿಗಾರಿಕೆ ಮೇಲೆ ನಿಗಾ ಇಲ್ಲ’

‘ಈ ಪ್ರಕರಣವು ನದಿ ಗಣಿಗಾರಿಕೆಯ ಮೇಲೆ ಸೂಕ್ತ ನಿಗಾ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ. ಹೀಗಾಗಿ ಲಭ್ಯವಿರುವ ತಂತ್ರಜ್ಞಾನ ಬಳಸಿ ಸಮಸ್ಯೆಗಳನ್ನು ನಿಭಾಯಿಸಲು ಇದು ಸಕಾಲವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ‘ನದಿ ಪಾತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ನೀಡುವ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ‘ನದಿಗಳ ಗಡಿ ಮರಳಿನ ದಿಬ್ಬಗಳನ್ನು ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ಗುರುತಿಸಬೇಕು. ಇವುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬೇಕು. ಗಣಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಉಪಗ್ರಹ ಆಧಾರಿತ ಚಿತ್ರಗಳ ವ್ಯವಸ್ಥೆಯನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ನಿರ್ವಹಿಸಬೇಕು’ ಎಂದು ಆದೇಶದಲ್ಲಿ ವಿವರಿಸಿದೆ.

ವರದಿ ಸಲ್ಲಿಕೆಗೆ 6 ವಾರ ಗಡುವು

‘ನದಿ ಪಾತ್ರ ಮರಳಿನ ದಿಬ್ಬಗಳಲ್ಲಿ ಕಂಡು ಬರುವ ಯಾವುದೇ ಬದಲಾವಣೆಯನ್ನು ನೈಜ ಸಮಯದಲ್ಲಿ ಪತ್ತೆ ಹಚ್ಚಿ ಮಾಹಿತಿ ನೀಡುವ ವ್ಯವಸ್ಥೆಯೊಂದನ್ನು ರೂಪಿಸಬೇಕು. ಈ ದಿಸೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಣಿ ಇಲಾಖೆ ನಿರ್ದೇಶಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಮತ್ತು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೆರವು ಪಡೆಯಬೇಕು. ಈಗ ನೀಡಿರುವ ನಿರ್ದೇಶನಗಳ ಅನುಪಾಲನಾ ವರದಿಯನ್ನು ಆರು ವಾರಗಳಲ್ಲಿ ಹೈಕೋರ್ಟ್ಗೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ಗಡುವು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.