ಅನನ್ಯಾ ಭಟ್ ಕಥೆಯೆಲ್ಲಾ ಸುಳ್ಳು...
‘ನನ್ನ ಮಗಳು ಅನನ್ಯಾ ಭಟ್ 2003ರಲ್ಲಿ ಧರ್ಮಸ್ಥಳಕ್ಕೆ ಹೋದವಳು ನಾಪತ್ತೆ ಯಾಗಿದ್ದಾಳೆ ಎಂದು ನಾನು ಆಕೆಯ ತಾಯಿ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ಅವರ ಹೇಳಿಕೆಗಳೂ ಸುಳ್ಳು ಎಂಬುದು ಎಸ್‌ಐಟಿ ತನಿಖೆಯ ವೇಳೆ ಕಂಡುಬಂದಿದೆ’ ಎಂದು ಜಗದೀಶ್ ನ್ಯಾಯಪೀಠಕ್ಕೆ ತಿಳಿಸಿದರು. ‘ಸುಜಾತಾ ಭಟ್ ತೋರಿಸಿದ್ದ ಯುವತಿಯ ಫೋಟೊ ಅನುಸರಿಸಿ ಆ ಯುವತಿಯ ವಾರಸುದಾರರನ್ನು ಬೆಂಗಳೂರಿನಲ್ಲಿ ಗುರುತಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಸುಜಾತಾ ಭಟ್ ತೋರಿಸಿದ್ದ ಫೋಟೊದಲ್ಲಿನ ಯುವತಿ ಅವರ ಪುತ್ರಿಯಲ್ಲ ಎಂಬುದು ಈ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಜಗದೀಶ್ ಸ್ಪಷ್ಟಪಡಿಸಿದರು.