ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರಿನಲ್ಲಿ ಕೌರವನಿಗೆ ಒಲಿದ ಜಯ

Last Updated 9 ಡಿಸೆಂಬರ್ 2019, 11:57 IST
ಅಕ್ಷರ ಗಾತ್ರ

ಹಿರೇಕೆರೂರು: ಕುತೂಹಲ ಕೆರಳಿಸಿದ್ದ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.‍ಪಾಟೀಲ್‌29,067 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಬನ್ನಿಕೋಡಅವರು 56,495 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಮತ ಎಣಿಕೆ ಆರಂಭದಿಂದಲೂ ಬಿ.ಸಿ.ಪಾಟೀಲ್‌ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಸುತ್ತಿನಲ್ಲೂ 2 ರಿಂದ 3 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.

ಹಿರೇಕೆರೂರಿನಲ್ಲಿಬಿ.ಸಿ.ಪಾಟೀಲ 85,562 ಮತಗಳನ್ನು ಪಡೆದು 29 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.

ಪ್ರಜಾಕೀಯ ಪಕ್ಷದ ಅಭ್ಯರ್ಥಿ 597 ಮತಗಳನ್ನು ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರದ ಸಮಯದಲ್ಲಿ ಬಿ.ಸಿ.ಪಾಟೀಲ್‌ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತ ಬಂದಿದ್ದರು.

ಹಿರೇಕೆರೂರು ಕ್ಷೇತ್ರದ ಫಲಿತಾಂಶ–2019
ಅಭ್ಯರ್ಥಿ ಪಕ್ಷ ಪಡೆದ ಮತಗಳು
ಬಿ.ಸಿ.ಪಾಟೀಲ ಬಿಜೆಪಿ 85,562
ಬಿ.ಎಚ್‌.ಬನ್ನಿಕೋಡ ಕಾಂಗ್ರೆಸ್‌ 56,495
ದೇವೇಂದ್ರಪ್ಪ ಉತ್ತಮ ಪ್ರಜಾಕೀಯ ಪಕ್ಷ 597
ಮಂಜುನಾಥ ಜಿ.ಎಸ್‌ ಕರ್ನಾಟಕ ರಾಷ್ಟ್ರ ಸಮಿತಿ 193
ಹರೀಶ ಎಸ್‌.ಇಂಗಳಗೊಂದಿ ಕರ್ನಾಟಕ ಜನತಾ ಪಕ್ಷ 182
ಉಜನಪ್ಪ ಜೆ.ಕೋಡಿಹಳ್ಳಿ ಪಕ್ಷೇತರ 275
ರಾಜಶೇಖರ ಕೆ.ದುದಿಹಳ್ಳಿ ಪಕ್ಷೇತರ 133
ರುದ್ರಯ್ಯ ಸಾಲಿಮಠ ಪಕ್ಷೇತರ 356
ಪೂಜಾರ ಕಲ್ಲಪ್ಪ ಪಕ್ಷೇತರ 472

ಹಿರೇಕೆರೂರು ಕ್ಷೇತ್ರದ ಮತದಾನದ ವಿವರ

ಒಟ್ಟು ಮತದಾರರು;1,83,481

ಮತ ಚಲಾಯಿಸಿದವರು;1,44,265

ನೋಟಾ;789

ತಿರಸ್ಕೃತ ಮತಗಳು;9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT