‘₹2.40 ಕೋಟಿ ಪರಿಹಾರ ನೀಡುವಂತೆ ಶಿಫಾರಸು’
‘2023ರ ನವೆಂಬರ್‌ನಿಂದ ಈವರೆಗೆ 7,585 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಪೈಕಿ ಮಾನವ ಹಕ್ಕು ಉಲ್ಲಂಘನೆ ಸಾಬೀತಾದ 30 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ₹2.40 ಕೋಟಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ್ ಭಟ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘29 ಪ್ರಕರಣಗಳಲ್ಲಿ ಗೃಹ ಇಲಾಖೆಯಿಂದ ₹2.10 ಕೋಟಿ ಮತ್ತು ಒಂದು ಪ್ರಕರಣದಲ್ಲಿ ಬೆಂಗಳೂರು ಜಲಮಂಡಳಿಯಿಂದ ₹30 ಲಕ್ಷ ಪರಿಹಾರ ವಿತರಣೆಗೆ ಶಿಫಾರಸು ಮಾಡಲಾಗಿದೆ’ ಎಂದರು.