ಬೆಂಗಳೂರು: ಐಸಿಎಸ್‌ಇ 12ನೇ ತರಗತಿಯಲ್ಲಿ ನಗರದ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ ವಿಭಾ ಸ್ವಾಮಿನಾಥನ್ 400ಕ್ಕೆ 400 ಅಂಕ ಗಳಿಸುವ ಮೂಲಕ ದೇಶದ ಜಂಟಿ ಟಾಪರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ವಿಶೇಷವೆಂದರೆ, ಇದೇ ಶಾಲೆಯ ಇನ್ನೂ ಮೂವರು ಟಾಪರ್‌ಗಳು ರಾಷ್ಟ್ರಮಟ್ಟದಲ್ಲಿ 2 ಮತ್ತು 3ನೇ ಸ್ಥಾನ ಗಳಿಸಿದ್ದಾರೆ. ಫಝಿಲ್ ನಯೀರ್ 399 ಅಂಕ ಗಳಿಸಿದ್ದರೆ, ದೀಕ್ಷಾ ಬಾಲಾಜಿ ಮತ್ತು ಮಿಹಿರ್ ವಿಶ್ವನಾಥನ್ ರಾಜಮಾನೆ ತಲಾ 398 ಅಂಕ ಪಡೆದಿದ್ದಾರೆ.

10 ನೇ ತರಗತಿಯಲ್ಲಿ ನಗರದ ಶ್ರೀ ವಾಣಿ ಪಬ್ಲಿಕ್ ಸ್ಕೂಲ್‌ನ ವಿ.ಸಾಧನಾ ದೇಶದ 3ನೇ ಟಾಪರ್ ಆಗಿದ್ದಾರೆ.

ಈ ಮಧ್ಯೆ, 12ನೇ ತರಗತಿಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಸಾಧನೆ ಈ ಬಾರಿ ಸುಧಾರಿಸಿದ್ದರೆ, 10ನೇ ತರಗತಿಯಲ್ಲಿ ಸಾಧನೆ ಕೊಂಚ ಕುಸಿದಿದೆ.

12ನೇ ತರಗತಿಯ ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ 99.49 ಆಗಿದ್ದು (ಕಳೆದ ವರ್ಷ ಶೇ 99.2), 10ನೇ ತರಗತಿಯ ಉತ್ತೀರ್ಣ ಪ್ರಮಾಣ ಶೇ 99.77 (ಕಳೆದ ವರ್ಷ ಶೇ 99.78) ಆಗಿದೆ. ರಾಜ್ಯದ 35 ಶಾಲೆಗಳ 1,769 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9 ಮಂದಿ ಅನುತ್ತೀರ್ಣರಾಗಿದ್ದಾರೆ. 10ನೇ ತರಗತಿಯಲ್ಲಿ 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 42 ಮಂದಿ ಅನುತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 12ನೇ ತರಗತಿಯಲ್ಲಿ ಬಾಲಕಿಯರೆಲ್ಲರೂ ಉತ್ತೀರ್ಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.