ಪ್ರಬಲ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂರಚನೆ ಮತ್ತು ಸ್ಥಾಪನೆಯೇ ನಮ್ಮ ಉತ್ಕೃಷ್ಟ ಸಂವಿಧಾನದ ಜೀವಾಳ. ಸಾರ್ವತ್ರಿಕ ಚುನಾವಣೆಗಳ ನಂತರ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷ ಸಂಸತ್ನಲ್ಲಿ ಮೂರನೇ ಎರಡಕ್ಕಿಂತಲೂ ಅಧಿಕ ಬಹುಮತ ಹೊಂದಿದ್ದರೂ ಸಂವಿಧಾನದ ಮೂಲ ಆಶಯಗಳನ್ನು ಬದಲಿಸುವುದು ಅಸಾಧ್ಯ. ಸಂವಿಧಾನದ ಮೂಲ ಆಶಯಗಳನ್ನು ಬದಲಾವಣೆ ಮಾಡುವ ಅಧಿಕಾರ ದೇಶವನ್ನು ಆಳುವ ಯಾವುದೇ ಪಕ್ಷದ ಸರ್ಕಾರಕ್ಕೂ ಇಲ್ಲ. ಇದೇ ಸಂವಿಧಾನದ ಮೂಲ ತತ್ವ (ಸ್ವರೂಪ).

ನೆರೆಯ ರಾಷ್ಟ್ರ ಪಾಕಿಸ್ತಾನದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಮ್ಮೆ ಅವಲೋಕಿಸಿದರೆ ಭಾರತದ ಸಂವಿಧಾನದ ಮೂಲತತ್ವಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪಾಕಿಸ್ತಾನದಲ್ಲೂ ಸಂಸದೀಯ ವ್ಯವಸ್ಥೆ ಮತ್ತು ದ್ವಿಸದನಗಳ ಶಾಸಕಾಂಗ ವ್ಯವಸ್ಥೆ ಇದ್ದರೂ ಅಲ್ಲಿನ ಸೇನಾಧಿಕಾರಿಗಳಾಗಿದ್ದ ಅಯೂಬ್ ಖಾನ್, ಯಾಹ್ಯಾ ಖಾನ್, ಜಿಯಾ-ಉಲ್-ಹಕ್, ಪರ್ವೇಜ್ ಮುಷರಫ್ ಮೊದಲಾದವರು ಚುನಾಯಿತವಾದ ಪ್ರಜಾಪ್ರಭುತ್ವ ಸರ್ಕಾರವನ್ನು ಕಿತ್ತೆಸೆದು ದೇಶದ ಆಡಳಿತ ನಡೆಸಿದ್ದಾರೆ. ಸೇನಾ ಹಸ್ತಕ್ಷೇಪದಂತಹ ಒಂದೇ ಒಂದು ಉದಾಹರಣೆ ಭಾರತದಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ಸಂವಿಧಾನದ ರೀತ್ಯ ಅದು ಎಂದಿಗೂ ಅಸಾಧ್ಯ. 1950ನೇ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ನಂತರ (1975–77ರ ತುರ್ತು ಪರಿಸ್ಥಿತಿ ಹೊರತುಪಡಿಸಿ) ಇಲ್ಲಿಯವರೆಗೂ ಜನರಿಂದ ಆಯ್ಕೆಯಾದ ಸರ್ಕಾರಗಳೇ ಆಡಳಿತ ನಡೆಸಿವೆ. ಲೋಕಸಭೆಗೆ ಒಂದು ಸಾರ್ವತ್ರಿಕ ಚುನಾವಣೆ ನಡೆದ ನಂತರ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟಗಳಿಗೆ ಸುಲಲಿತವಾಗಿ ಅಧಿಕಾರ ಹಸ್ತಾಂತರವಾಗಿದೆ. ದೇಶದ ಸಂಸದೀಯ ಪ್ರಜಾಪ್ರಭುತ್ವ ಗಟ್ಟಿಯಾಗುತ್ತಲೇ ಸಾಗಿದೆ.

ಸಂವಿಧಾನದ ಮೂಲತತತ್ವಗಳ ಪ್ರಕಾರ ದೇಶದ ಇತರ ಎಲ್ಲ ಕಾನೂನುಗಳಿಗಿಂತ ಸಂವಿಧಾನಕ್ಕೇ ಪರಮಾಧಿಕಾರ ಇದೆ. ದೇಶದ ಸಾರ್ವಭೌಮತೆಗೆ ಧಕ್ಕೆಯಾಗುವ ನಡವಳಿಕೆಗಳನ್ನು ಆಳುವ ಸರ್ಕಾರಗಳು, ಪ್ರಜೆಗಳು ಪ್ರದರ್ಶಿಸುವುದು ನಿಷಿದ್ಧ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ಜಾರಿಗೆ ತಂದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸೇನೆಯಾಗಲಿ, ಸರ್ವಾಧಿಕಾರಿಗಳಾಗಲಿ ಬುಡಮೇಲು ಮಾಡಲು ಸಾಧ್ಯವೇ ಇಲ್ಲ. ಸ್ವತಂತ್ರ ಚುನಾವಣಾ ಆಯೋಗವು ಕಾಲಕಾಲಕ್ಕೆ ನಡೆಸುವ ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬರುತ್ತವೆ. ಬಹುಮತ ಪಡೆದ ಪಕ್ಷಗಳ ಸಂಸದೀಯ ನಾಯಕರು ಪ್ರಧಾನಿಯಾಗಿ ಅಧಿಕಾರದ ಚಲಾಯಿಸುತ್ತಾರೆ. ಬಹುಮತ ಕಳೆದುಕೊಂಡ ಕ್ಷಣವೇ ಸರ್ಕಾರ ಪತನವಾಗುತ್ತದೆ. ಈ ಪ್ರಕ್ರಿಯೆ ಏಳು ದಶಕಗಳಿಂದ ಅತ್ಯಂತ ಸುಲಲಿತವಾಗಿ ಸಾಗುತ್ತಾ ಬಂದಿದೆ.

ಅಮೆರಿಕದಂತೆ ಸ್ವತಂತ್ರ್ಯ ರಾಜ್ಯಗಳ ಸಂಯೋಜ ನೆಯ ಒಕ್ಕೂಟ ವ್ಯವಸ್ಥೆ ಭಾರತದಲ್ಲಿ ಇಲ್ಲ. ಆದರೂ ಭಾಷೆ, ಆಡಳಿತ, ಸಮಾನ ಹಿತಾಸಕ್ತಿ ಪ್ರಾಂತ್ಯಗಳ ಆಧಾರದಲ್ಲಿ ರೂಪುಗೊಂಡ ರಾಜ್ಯಗಳನ್ನು ಒಳಗೊಂಡ ಪ್ರಬಲ ಒಕ್ಕೂಟ ವ್ಯವಸ್ಥೆಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ರಾಷ್ಟ್ರದ ಸಾರ್ವಭೌಮತೆ ಕಾಪಾಡುವ ಪ್ರಬಲ ಕೇಂದ್ರ ಸರ್ಕಾರ, ಸ್ಥಳೀಯ ಆಡಳಿತದ ಸ್ವಾತಂತ್ರ್ಯವನ್ನು ಹೊಂದಿರುವ ರಾಜ್ಯ ಸರ್ಕಾರಗಳ ಮಧ್ಯೆ ವ್ಯವಸ್ಥಿತವಾಗಿ ಅಧಿಕಾರ ಹಂಚಿಕೆಯ ಸೂತ್ರ ಹೆಣೆಯಲಾಗಿದೆ. ಅದಕ್ಕಾಗಿ ಕೇಂದ್ರ, ರಾಜ್ಯಕ್ಕೆ ಪ್ರತ್ಯೇಕ ಪಟ್ಟಿ, ಎರಡೂ ಸೇರಿ ಸಮವರ್ತಿ ಪಟ್ಟಿ ಅಳವಡಿಸಲಾಗಿದೆ. ಸಮವರ್ತಿ ಪಟ್ಟಿಯ ವಿಷಯಗಳಲ್ಲಿ ಕಾನೂನು ಮಾಡುವ ಅಂತಿಮ ಅಧಿಕಾರವನ್ನು ಕೇಂದ್ರಕ್ಕೇ ನೀಡಲಾಗಿದೆ.

ಬಹುಭಾಷೆ, ಧರ್ಮ, ಸಂಸ್ಕೃತಿ, ಆಚರಣೆಗಳ ದೇಶದಲ್ಲಿ ಏಕತೆ, ಸಮಾನತೆ, ಜಾತ್ಯತೀತ ಪರಿಕಲ್ಪನೆಗಳಿಗೆ ಒತ್ತು ನೀಡಲಾಗಿದೆ. ಅಧಿಕಾರ ಚಲಾಯಿಸುವಾಗ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲು ‘ರಾಜನೀತಿ ನಿರ್ದೇಶಕ ತತ್ವ’ಗಳನ್ನು ಅಳವಡಿಸಲಾಗಿದೆ. ಪ್ರಜೆಗಳ ಹಕ್ಕುಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು. ಆರು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಅದೇ ರೀತಿ ಪ್ರಜೆಗಳು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಪಟ್ಟಿ ಮಾಡಲಾಗಿದೆ. ಧರ್ಮ ನಿರಪೇಕ್ಷತೆಯೂ ಸಂವಿಧಾನದ ಮೂಲ ಆಶಯ.

ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ವ್ಯಾಪ್ತಿ, ಸ್ವರೂಪ, ಅಧಿಕಾರವನ್ನು ನಿರ್ದಿಷ್ಟವಾಗಿ ನಿಗದಿ ಮಾಡಲಾಗಿದೆ. ಪರಸ್ಪರ ಸಂಘರ್ಷಕ್ಕೆ ಅವಕಾಶ ಇಲ್ಲದಂತೆ ಸೌಹಾರ್ದ, ಸುಲಲಿತ ಕಾರ್ಯನಿರ್ವಹಣೆಯ ಮಿತಿ–ವ್ಯಾಪ್ತಿಗಳನ್ನು ಸ್ಪಷ್ಟಪಡಿಸಲಾಗಿದೆ. ಸಾಂವಿಧಾನಿಕ ಸಂಸ್ಥೆ, ಹುದ್ದೆಗಳನ್ನು ರದ್ದು ಮಾಡಲು ಸಾಧ್ಯವಾಗದಂತೆ ತಡೆಯಲಾಗಿದೆ. ಅದೇ ನಮ್ಮ ಸಂವಿಧಾನದ ಮೂಲತತ್ವಗಳ ವೈಶಿಷ್ಟ್ಯ ಮತ್ತು ಸಾಮರ್ಥ್ಯ

ಪ್ರಮುಖ ಮೂಲತತ್ವಗಳು

ಸಂವಿಧಾನಕ್ಕೆ ಪರಮಾಧಿಕಾರ

ಭಾರತದ ಸಾರ್ವಭೌಮತ್ವ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ

ಒಕ್ಕೂಟದ ಸ್ವರೂಪ, ಪ್ರಬಲ ಕೇಂದ್ರ

ದೇಶದ ಐಕ್ಯತೆ ಮತ್ತು ಸಮಗ್ರತೆ

ಧರ್ಮನಿರಪೇಕ್ಷತೆ, ಸಮಾಜವಾದ

ಕಲ್ಯಾಣ ರಾಜ್ಯದ ಪರಿಕಲ್ಪನೆ

ಸಾಮಾಜಿಕ ನ್ಯಾಯದ ಆದರ್ಶ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ

ನ್ಯಾಯಿಕ ಪುನರ್ಪರಿಶೀಲನೆ

ಕಾನೂನಿನ ಮುಂದೆ ಸಮಾನತೆ

ವ್ಯಕ್ತಿಯ ಘನತೆ, ಸ್ವಾತಂತ್ರ್ಯ

ಕಾಲಬದ್ಧ ಚುನಾವಣಾ ವ್ಯವಸ್ಥೆ

ತಿದ್ದುಪಡಿ–ಬದಲಾವಣೆ

ಕಾಲ, ಅಗತ್ಯಕ್ಕೆ ಅನುಗುಣವಾಗಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡುವ, ಕೆಲ ಅಂಶಗಳನ್ನು ಬದಲಿಸುವ–ಸೇರಿಸುವ ಅಧಿಕಾರವನ್ನು ಸಂಸತ್ ಹೊಂದಿದೆ.

ಭಾರತೀಯ ಸಂವಿಧಾನದ 368ನೇ ವಿಧಿಯ ಅನ್ವಯ ತಿದ್ದುಪಡಿಗಳಿಗೆ ಅವಕಾಶವಿದೆ. ಸಂಸತ್ತಿನ ಉಭಯ ಸದನ ಗಳು ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದು. ಹೆಚ್ಚಿನ ತಿದ್ದುಪಡಿಗಳಿಗೆ ವಿಶೇಷ ಬಹುಮತದ ಅಗತ್ಯವಿದೆ. ಸದನದ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಹಾಜರಿದ್ದು ಮತ ಚಲಾಯಿಸಬೇಕು. ಒಕ್ಕೂಟ ವ್ಯವಸ್ಥೆಯ ಕೆಲ ತಿದ್ದುಪಡಿಗಳಿಗೆ ಸಂಸತ್ನ ಮೂರನೇ ಎರಡರಷ್ಟು ಬಹುಮತದ ಜತೆಗೆ, ರಾಜ್ಯ ಶಾಸಕಾಂಗಗಳ ಅನುಮೋದನೆ ಅಗತ್ಯ.

ಸಂವಿಧಾನದ ಬದಲಾವಣೆ ಎಂದರೆ ‘ಮೂಲ ತತ್ವಗಳ’ ಬದಲಾವಣೆ. ಅಂತಹ ಅಧಿಕಾರ ಸಂಸತ್ಗೂ ಇಲ್ಲ. ಹಾಗಾಗಿ, ತಿದ್ದುಪಡಿ ಹಾಗೂ ಬದಲಾವಣೆ ಎನ್ನುವುದು ಎರಡು ಭಿನ್ನ ಪರಿಕಲ್ಪನೆಗಳು.

‘ಸುಪ್ರೀಂ’ ವ್ಯಾಖ್ಯಾನ

ಸಂವಿಧಾನದ ಯಾವುದೇ ಭಾಗ, ಅಧ್ಯಾಯ ಅಥವಾ ವಿಧಿಗಳಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬ ವಿವರಣೆ ಇಲ್ಲ. ಸುಪ್ರೀಂಕೋರ್ಟ್ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿದೆ. ಸಂಸದೀಯ ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯ ಸೇರಿದಂತೆ ಯಾವುದೇ ಮೂಲ ತತ್ವಗಳನ್ನು ಬದಲಿಸುವುದು, ತಿದ್ದುಪಡಿ ಮಾಡುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.