ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ಯಲ್ಲಿ ಕ್ಯಾಂಪಸ್ ತೆರೆಯಲು 30 ವಿಶ್ವವಿದ್ಯಾಲಯಗಳು ಸಮ್ಮತಿಸಿವೆ. 9 ವಿಶ್ವವಿದ್ಯಾಲಯಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ‘ಕ್ವಿನ್ ಸಿಟಿ’ ಯೋಜನೆ ರೂಪುರೇಷೆ ಕುರಿತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜತೆ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಹತ್ವದ ಮಾತುಕತೆ ನಡೆಸಿದರು.

ಸಭೆಯ ನಂತರ ಮಾತನಾಡಿದ ಸಚಿವ ಸುಧಾಕರ್, ಸಮಕಾಲೀನ ಜಗತ್ತಿಗೆ ತಕ್ಕಂತೆ ಉದ್ಯೋಗ ಆಧಾರಿತ ಕಲಿಕೆಯ ಪಠ್ಯಕ್ರಮ ರೂಪಿಸಲು, ಉನ್ನತ ಶಿಕ್ಷಣದ ಮುಂದಿನ ಹೆಜ್ಜೆ ನಿರ್ಧರಿಸಲು ಶಿಕ್ಷಣ ತಜ್ಞರು ಹಾಗೂ ಉದ್ಯಮಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗುವುದು ಎಂದರು.

ಉದ್ಯಮಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಪಠ್ಯಕ್ರಮ ಬದಲಿಸಲು ಕೇಳುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಕಲಿಕೆ ಸಮಗ್ರವಾಗಿರಬೇಕು. ಬಹುಮುಖಿಯಾದ ಕೌಶಲ ಕಲಿಸಬೇಕು. ಆಗ ಮಾತ್ರ ಪರ್ಯಾಯ ಉದ್ಯೋಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಶೇ 70ರಷ್ಟು ಹೊರರಾಜ್ಯಗಳ ವಿದ್ಯಾರ್ಥಿಗಳೇ ಇದ್ದಾರೆ ಎಂದು ಹೇಳಿದರು.

ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಪ್ರಭಾಕರ ಕೋರೆ, ಪಿಇಎಸ್ನ ಜವಾಹರ್, ಆರ್.ವಿ. ಶಿಕ್ಷಣ ಸಂಸ್ಥೆಯ ನಾಗರಾಜ್ ಉಪಸ್ಥಿತರಿದ್ದರು.

ಕ್ವಿನ್ ಸಿಟಿಯ ಭಾಗವಾಗಲು ಪಿಲಾನಿಯಲ್ಲಿರುವ ಹೆಸರಾಂತ ಬಿರ್ಲಾ ತಾಂತ್ರಿಕ ವಿಜ್ಞಾನಗಳ ಸಂಸ್ಥೆ ತೋಟಗಾರಿಕೆ ಕ್ಷೇತ್ರದ ವರ್ಲ್ಡ್ ಹಾರ್ಟಿ ಸೆಂಟರ್ ಆಸಕ್ತಿ ತೋರಿವೆ
ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ

ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿದ್ದು ಪದವಿ ಹಂತದಲ್ಲಿ 11 ಸಾವಿರ ಸ್ನಾತಕೋತ್ತರ ಹಂತದಲ್ಲಿ 6 ಸಾವಿರ ಸೀಟುಗಳ ಹಂಚಿಕೆಯಾಗುತ್ತಿದೆ
ಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.