ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಇತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ವೇಳೆ ವಶಕ್ಕೆ ಪಡೆಯಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸುವ ಪ್ರಕ್ರಿಯೆಯನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಪೂರ್ಣಗೊಳಿಸಿತು.

ಮರಳಿಸಿದ ವಸ್ತುಗಳಲ್ಲಿ ಜಯಲಲಿತಾ ಅವರ ಚಿನ್ನದ ಆಭರಣಗಳಾದ ಡಾಬು, ಕಿರೀಟ, ಕತ್ತಿ, ವಿವಿಧ ವಿನ್ಯಾಸದ ಆಕರ್ಷಕ ಸರಗಳು, ವಜ್ರ ವೈಢೂರ್ಯ ಸೇರಿವೆ.

‘ನಗದು, ವಜ್ರಾಭರಣಗಳನ್ನು ತಮಿಳುನಾಡಿನ ಗೃಹ ಮತ್ತು ಅಬಕಾರಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೆ.ಅನ್ನೆ ಮೇರಿ ಸ್ವರ್ಣಾ, ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ವಿಶೇಷ ತನಿಖಾ ತಂಡದ ಪೊಲೀಸ್ ವರಿಷ್ಠಾಧಿಕಾರಿ ವಿಮಲಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಪುಗಳ್ ವೆಂದನ್ ನೇತೃತ್ವದ ತಂಡಕ್ಕೆ ಮರಳಿಸಲಾಗಿದೆ’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ. ಮೋಹನ್ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.

ವಜ್ರ, ಎಮರಾಲ್ಡ್ ಮತ್ತು ರೂಬಿ ಹರಳುಗಳನ್ನು ಒಳಗೊಂಡ ಚಿನ್ನಾಭರಣಗಳನ್ನು ಈ ಅಧಿಕಾರಿಗಳ ತಂಡ ಸ್ವೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.