ಮುಧೋಳ: ಜೂನಿಯರ್ ರಿಸರ್ಚ್ ಫೆಲೊಶಿಪ್ (ಜೆಆರ್‌ಎಫ್) ಪರೀಕ್ಷೆಯ ಕೃಷಿ ಎಂಜಿನಿಯರಿಂಗ್ ವಿಭಾಗದಲ್ಲಿ ತಾಲ್ಲೂಕಿನ ಹೆಬ್ಬಾಳದ ಚೇತನ್ ಬಾರಕೇರ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದೇಶದ 64 ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಚೇತನ್ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದು, ಪ್ರತಿ ತಿಂಗಳು ₹12,400 ಫೆಲೊಶಿಪ್ ಸಿಕ್ಕಿದೆ.

ಹೆಬ್ಬಾಳದ ಗಡ್ಡೆಪ್ಪ ಬಾರಕೇರ ಹಾಗೂ ಅನುಸೂಯಾ ದಂಪತಿ ಪುತ್ರ ಚೇತನ್, ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಮುಗಿಸಿದ್ದರು.

‘ರಜೆಗೆಬಂದಾಗ ತಂದೆಯೊಂದಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದೆ. ಕೃಷಿ ಹಿನ್ನೆಲೆಯಿಂದ ಬಂದ ನಾನು ಅದರಲ್ಲಿಯೇ ಸಾಧನೆ ಮಾಡಬೇಕು ಎಂಬ ಕಾರಣಕ್ಕೆ ಕೃಷಿ ಎಂಜಿನಿಯರಿಂಗ್ ಕಲಿಯಲು ಮುಂದಾದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.