ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಜೆಎಸ್‌ಡಬ್ಲ್ಯೂ ಸ್ಟೀಲ್ 3ನೇ ಘಟಕ‌ ವಿಸ್ತರಣೆ

Last Updated 27 ಜೂನ್ 2018, 7:30 IST
ಅಕ್ಷರ ಗಾತ್ರ

ಬಳ್ಳಾರಿ: ಉಕ್ಕು ಉತ್ಪಾದಿಸುವಜೆಎಸ್‌ಡಬ್ಲ್ಯೂ ಸ್ಟೀಲ್‌ನ3ನೇ ಘಟಕವನ್ನು 2020ರ ವೇಳೆಗೆ ಆರಂಭಿಸಲಾಗುವುದು. ಅದಕ್ಕಾಗಿ ₹7,500 ಕೋಟಿ ವಿನಿಯೋಗಿಸಲಾಗುವುದು ಎಂದು ವಿಜಯನಗರ ಸ್ಟೀಲ್ಸ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ನಾವಲ್ ತಿಳಿಸಿದರು.

ತೋರಣಗಲ್‌ನ ಸ್ಟೀಲ್ಸ್ ಘಟಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸದ್ಯ ಚಾಲ್ತಿಯಲ್ಲಿರುವ ಘಟಕ ವರ್ಷಕ್ಕೆ 12 ದಶಲಕ್ಷ ಟನ್ ಉಕ್ಕನ್ನು ಉತ್ಪಾದಿಸುತ್ತಿದೆ. ಹೊಸ ಘಟಕ ಸ್ಥಾಪನೆಯಾದರೆ 13 ದಶಲಕ್ಷ ಟನ್ ಆಗಲಿದೆ. ಜತೆಗೆ, ‌ಹಾಟ್‌ಮೆಟಲ್ ಸುಧಾರಣೆ, ಸ್ಟೀಲ್ ಮೆಲ್ಟಿಂಗ್ ಶಾಪ್‌ ಉನ್ನತೀಕರಣ ಕಾರ್ಯವೂ ನಡೆಯಲಿದೆ ಎಂದರು.

ಜೆಎಸ್‌ಡಬ್ಲ್ಯೂ ಸ್ಟೀಲ್ ಎರಡು ಕಬ್ಬಿಣದ ಅದಿರು ಗಣಿಗಳಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇನ್ನೂ ಮೂರು ಗಣಿಗಳ ಅನುಮತಿಗಾಗಿ ಕಾಯುತ್ತಿದೆ. ಐದು ಗಣಿಗಳಿಂದ ಅದಿರಿನ ಅಗತ್ಯದಲ್ಲಿ ಶೇ 20 ರಷ್ಟು ಪೂರೈಕೆಯಾಗುತ್ತದೆ ಎಂದರು.
ಗಣಿಗಳು ಘಟಕದಿಂದ ಸುಮಾರು 35 ಕಿ.ಮೀ ದೂರದಲ್ಲಿರುವುದರಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT