ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಹುದೊಡ್ಡ ಶಾಕ್ ಹೊಡೆಯಲಿದೆ: ಕಾಂಗ್ರೆಸ್‌ ವ್ಯಂಗ್ಯ

Published : 14 ಜೂನ್ 2023, 16:13 IST
Last Updated : 14 ಜೂನ್ 2023, 16:13 IST
ಫಾಲೋ ಮಾಡಿ
Comments

ಬೆಂಗಳೂರು: ಒಂದು ವರ್ಷ ಕಳೆದರೂ ಬಿಜೆಪಿ ವಿಧಾನಸಭೆ ಸೋಲಿನ ಶಾಕ್‌ನಿಂದ ಹೊರ ಬರುವುದಿಲ್ಲ ಎಂದು ಕಾಂಗ್ರೆಸ್ ಕುಹಕವಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ದೊಡ್ಡ ಶಾಕ್ ಹೊಡೆಯಲಿದೆ ಎಂದಿರುವ ಕಾಂಗ್ರೆಸ್‌, ಇದರ ಮುನ್ಸೂಚನೆ ಅರಿತೇ ಪ್ರತಾಪ್‌ ಸಿಂಹ ಅವರ ರೋಧನೆ ಶುರುವಾಗಿದೆ ಎಂದು ವ್ಯಂಗ್ಯವಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಚುನಾವಣೆ ನಡೆದು ಒಂದು ತಿಂಗಳ ನಂತರವೂ ಬಿಜೆಪಿ ಸೋಲಿನ ಶಾಕ್‌ನಿಂದ ಹೊರಬಂದಿಲ್ಲ, ಒಂದು ವರ್ಷ ಕಳೆದರೂ ಹೊರಬರುವುದಿಲ್ಲ ಆ ಮಟ್ಟಿಗೆ ಶಾಕ್ ಹೊಡೆದಿದೆ.ನಂತರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಹುದೊಡ್ಡ ಶಾಕ್ ಹೊಡೆಯಲಿದೆ. ಇದರ ಮುನ್ಸೂಚನೆ ಅರಿತೇ ಪ್ರತಾಪ್‌ ಸಿಂಹ ಅವರ ರೋಧನೆ ಶುರುವಾಗಿದೆ. ಈ ಶೋಕಾಚರಣೆ ಇನ್ಮುಂದೆ ಬಿಜೆಪಿಗೆ ನಿರಂತರವಾಗಿರಲಿದೆ‘ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT