ಬೆಂಗಳೂರು: ‘ನೌಕರರ ವರ್ಗಾವಣೆ ಕುರಿತಂತೆ ಮೂರು ತಿಂಗಳಲ್ಲಿ ಮಾರ್ಗಸೂಚಿ ಹೊರಡಿಸಿ’ ಎಂದು ಹೈಕೋರ್ಟ್, ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ (ಎನ್ಡಬ್ಲ್ಯುಆರ್ಟಿಸಿ) ನಿರ್ದೇಶಿಸಿದೆ.

‘ನನ್ನನ್ನು ಚಿಕ್ಕೋಡಿ ವಿಭಾಗದಿಂದ ಬೆಳಗಾವಿ ವಿಭಾಗಕ್ಕೆ ವರ್ಗಾವಣೆ ಮಾಡಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಅಥಣಿ ಡಿಪೋದ ಚಂದ್ರಕಾಂತ್ ವೈ.ತೊರವಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ನಿಗಮದ ಉದ್ಯೋಗಿಯಾಗಿರುವ ಕಾರಣ ವರ್ಗಾವಣೆ ಆದೇಶವನ್ನು ಪ್ರಶ್ನಿಸುವ ಅರ್ಹತೆ ಇಲ್ಲ. ಆದರೆ, ಸಂಸ್ಥೆಯ ದಕ್ಷತೆ, ಸಮಗ್ರತೆ ಮತ್ತು ಸುಗಮ ಕಾರ್ಯ ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ನೌಕರರ ವರ್ಗಾವಣೆ ಒಂದು ಪ್ರಮುಖ ಆಡಳಿತಾತ್ಮಕ ಸಾಧನವಾಗಿದ್ದರೂ ವರ್ಗಾವಣೆಗಳನ್ನು ಅನಿಯಂತ್ರಿತವಾಗಿ ಅಥವಾ ಏಕರೂಪದ ಮಾನದಂಡಗಳಿಲ್ಲದೆ ಮಾಡಿದಾಗ, ಅವು ಅಸಮಾಧಾನ ಮತ್ತು ದುರುದ್ದೇಶಪೂರಿತ ಆರೋಪಕ್ಕೆ ಕಾರಣವಾಗುತ್ತವೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸಾರಿಗೆ ನೌಕರರ ವರ್ಗಾವಣೆಗೆ ಸದ್ಯ ಯಾವುದೇ ಮಾರ್ಗಸೂಚಿ ಇಲ್ಲದಿರುವ ಕಾರಣ ಮಾರ್ಗಸೂಚಿ ರೂಪಿಸುವವರೆಗೆ ಆಡಳಿತಾತ್ಮಕ ಆಧಾರದ ಮೇಲೆ ವರ್ಗಾವಣೆಗಳನ್ನು ಮಾಡಿದರೆ ಅದು ಏಕಪಕ್ಷೀಯವಾಗುತ್ತದೆ. ಹಾಗಾಗಿ, ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕಾಗುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.