‘ಸತ್ಯ ಕಹಿ: ನಮ್ಮ ಮಾತು ಕೇಳಲ್ಲ’
‘ನಿಮ್ಮ ಉತ್ತರ ಏಕಮುಖವಾಗಿದೆ. ದಾಖಲೆ ಸಮೇತ ನಾವು ಹೇಳುವ ಅಂಕಿ
ಅಂಶಗಳನ್ನು ಒಪ್ಪುವುದಿಲ್ಲ. ಸದನದ ಮತ್ತು ರಾಜ್ಯದ ಗಮನ ಬೆರೆಡೆ ಸೆಳೆಯಲು ಬೇಕೆಂದೇ ಆರ್‌ಎಸ್‌ಎಸ್ ಮುಂತಾದ ವಿವಾದ ಹುಟ್ಟುಹಾಕುತ್ತೀರಿ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.
‘ಪರಿಶಿಷ್ಟರ ಕಲ್ಯಾಣ ನಿಧಿ ದುರ್ಬಳಕೆ, ಅದರಲ್ಲೂ ಗ್ಯಾರಂಟಿಗಳಿಗೆ ವಿನಿಯೋಗಿಸುತ್ತಿರುವ ಕುರಿತ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ನಿಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾರಿ ತಪ್ಪಿಸುವ ಮಾರ್ಗ ಕಂಡುಕೊಂಡಿದ್ದೀರಿ. ನಿಮ್ಮ ಸರ್ಕಾರದ ಯೋಗ್ಯತೆ ಬಯಲಾಗಿದೆ ನೋಡಿ’ ಎಂದು ಅವರು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಪ್ರದರ್ಶಿಸಿದರು.