ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಲಕ್‌ ಕುಮಾರ್‌ ಸೇರಿ ನಾಲ್ವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ

Last Updated 10 ಫೆಬ್ರುವರಿ 2023, 4:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ (ಟಿಪಿಎಂಎಲ್‌) ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ ಕುಮಾರ್‌ ಅವರು 2019ನೇ ಸಾಲಿನ ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021,2022) ಪ್ರಶಸ್ತಿಗಳನ್ನು ಘೋಷಿಸ
ಲಾಗಿದೆ. ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿ, ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳಿಗೆ ನಾಡಿನ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ ತಿಳಿಸಿದ್ದಾರೆ.

ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿಗೆ ವಿಜಯವಾಣಿ ಮುಖ್ಯಸ್ಥರಾದ ವಿಜಯ ಸಂಕೇಶ್ವರ (2020), ಪಬ್ಲಿಕ್‌ ಟಿ.ವಿ. ಮುಖ್ಯಸ್ಥ ಎಚ್‌.ಆರ್‌. ರಂಗನಾಥ್‌ (2021) ಮತ್ತು ಆರ್ಥಿಕ ತಜ್ಞರಾದ ಸುಶೀಲ ಸುಬ್ರಮಣ್ಯಂ (2022) ಅವರು
ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿಯು ತಲಾ ₹50 ಸಾವಿರ, ವಾರ್ಷಿಕ ಪ್ರಶಸ್ತಿಯು ತಲಾ ₹25 ಸಾವಿರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ನಾಲ್ಕು ವರ್ಷಗಳೂ ಸೇರಿ 124 ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 21 ಪತ್ರಕರ್ತರನ್ನು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದತ್ತಿ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿವೆ.

ವಿವಿಧ ಪ್ರಶಸ್ತಿಗಳಿಗೆ ‘ಪ್ರಜಾವಾಣಿ’ ಯ ಒಟ್ಟು 11 ಪತ್ರಕರ್ತರು ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ ಎಸ್‌. ರವಿಪ್ರಕಾಶ್‌, ಎ.ಎಂ. ಸುರೇಶ, ಸೂರ್ಯಪ್ರಕಾಶ ಪಂಡಿತ್‌, ವಿ.ಎಸ್‌. ಸುಬ್ರಹ್ಮಣ್ಯ, ಚಂದ್ರಹಾಸ ಹಿರೇಮಳಲಿ, ಜಿ.ಎಚ್‌. ವೆಂಕಟೇಶ್‌, ಎಲ್‌. ಮಂಜುನಾಥ, ಚನ್ನಪ್ಪ ಮಾದರ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ‘ಅರಗಿಣಿ’ ಪ್ರಶಸ್ತಿಗೆ ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. (2021) ಆಯ್ಕೆಯಾಗಿದ್ದಾರೆ. ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ‘ಅಭಿಮಾನಿ’ ಪ್ರಶಸ್ತಿಗೆ ಬಸವರಾಜ ಹವಾಲ್ದಾರ್‌ ಅವರ ‘ದಾಖಲೆಯಲ್ಲಷ್ಟೇ ಬಯಲು ಶೌಚಾಲಯ’ (2019) ಲೇಖನ ಆಯ್ಕೆಯಾಗಿದೆ. ಪ್ರದೀಶ್‌ ಎಚ್‌. ಮರೋಡಿ ಅವರ ‘ಕೇಳುತ್ತಿಲ್ಲ ಮಲೆ ಮಕ್ಕಳ ಅಳಲು’ (2020) ಅತ್ಯುತ್ತಮ ಮಾನವೀಯ ವರದಿಯು ‘ಮೈಸೂರು ದಿಗಂತ’ ಪ್ರಶಸ್ತಿಗೆ ಆಯ್ಕೆಯಾಗಿದೆ.

ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ಡಾ.ಬಿ.ಆರ್‌. ಅಂಬೇಡ್ಕರ್‌ ‘ಮೂಕ ನಾಯಕ ಪ್ರಶಸ್ತಿ’ಗೆ ದಲಿತ ವಾಯ್ಸ್‌ ಸಂಪಾದಕ ವಿ.ಟಿ. ರಾಜಶೇಖರ್‌ (2019), ಮೈಸೂರು ವಿ.ವಿಯ ಪ್ರಾಧ್ಯಾಪಕಿ ಆರ್‌. ಇಂದಿರಾ (2020), ದೀನಬಂಧು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಜಿ.ಎಸ್‌. ಜಯದೇವ (2021), ಮೈಸೂರು ವಿ.ವಿ ಯ ಪ್ರಾಧ್ಯಾಪಕ ಮುಜಾಪ್ಫರ್‌ ಅಸ್ಸಾದಿ (2022) ಅವರನ್ನು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT