ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಂಧಿಮಾಗದರ ಕೈ ಸೇರಿದ ಸಿಎಂ ಜಾಲತಾಣ: ಸಿ.ಟಿ.ರವಿ ವಾಗ್ದಾಳಿ

Published : 18 ಆಗಸ್ಟ್ 2024, 15:57 IST
Last Updated : 18 ಆಗಸ್ಟ್ 2024, 15:57 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಖ್ಯಮಂತ್ರಿಯವರ ‘ಸಿಎಂ ಆಫ್ ಕರ್ನಾಟಕ’ ಎಂಬ ‘ಎಕ್ಸ್‌’ ಖಾತೆ ಸಂವಿಧಾನಾತ್ಮಕವಾದುದು. ಆದರೆ ಅದನ್ನು ಸಿದ್ದರಾಮಯ್ಯ ಅವರ ವಂಧಿಮಾಗದರು ಕಾಂಗ್ರೆಸ್‌ ಮುಖವಾಣಿಯಾಗಿ ಪರಿವರ್ತಿಸಿದ್ದಾರೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

‘ಈ ಸಾಮಾಜಿಕ ಜಾಲತಾಣದ ಖಾತೆಯನ್ನು ವಾರ್ತಾ ಇಲಾಖೆಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೊ ಅಥವಾ ಕೆಳಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೋ’ ಎಂದು ಅವರು ‘ಎಕ್ಸ್‌’ ಮೂಲಕ ಪ್ರಶ್ನಿಸಿದ್ದಾರೆ.

‘ಮುಖ್ಯಮಂತ್ರಿಯವರ ದೈನಂದಿನ ಸರ್ಕಾರದ ಕಾರ್ಯ ಚಟುವಟಿಕೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂಬ ನಿಟ್ಟಿನಲ್ಲಿ ವಾರ್ತಾ ಇಲಾಖೆ ಸೃಷ್ಟಿಸಿದ ಖಾತೆ. ಆದರೆ, ಈಗ ಏನಾಗುತ್ತಿದೆ ನೋಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಲು ಮತ್ತು ರಾಜ್ಯಪಾಲರನ್ನು ಟೀಕಿಸಲು ಈ ಖಾತೆಯನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT