ಬೆಂಗಳೂರು: ರಾಜ್ಯದಲ್ಲಿ ಏಕ ಶಿಕ್ಷಕ/ಶಿಕ್ಷಕಿ ಕಾರ್ಯನಿರ್ವಹಿಸುವ ಸರ್ಕಾರಿ ಶಾಲೆಗಳ ಸಂಖ್ಯೆ 6,675ಕ್ಕೆ ಏರಿಕೆಯಾಗಿದೆ. 2024–25ನೇ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ, ಈ ವರ್ಷದಲ್ಲಿ 1,263 ಶಾಲೆಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಪರಿಷತ್ತಿಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಇದೆ. ಆ ಪ್ರಕಾರ, 2024–25ರಲ್ಲಿ ರಾಜ್ಯದಲ್ಲಿ ಏಕ ಶಿಕ್ಷಕ/ಶಿಕ್ಷಕಿ ಇರುವ 5,412 ಸರ್ಕಾರಿ ಶಾಲೆಗಳಷ್ಟೇ ಇದ್ದವು. ಈಗ ಈ ಸಂಖ್ಯೆ 6,675.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಇದೆ. ಹಾಸನ ಜಿಲ್ಲೆಯಲ್ಲಿ ಇಂತಹ ಅತಿಹೆಚ್ಚು ಶಾಲೆಗಳಿವೆ (586) ಎಂದು ತಿಳಿಸಿದ್ದರು. ನಂತರದ ಸ್ಥಾನಗಳಲ್ಲಿ ತುಮಕೂರು (426),ಕೋಲಾರ (347) ಮತ್ತು ಚಿಕ್ಕಬಳ್ಳಾಪುರ (334) ಇವೆ.

ಧಾರವಾಡದಲ್ಲಿ ಇಂತಹ ಶಾಲೆಗಳ ಸಂಖ್ಯೆ ಕಡಿಮೆ (26) ಇವೆ. ಏಕ ಶಿಕ್ಷಕ/ಶಿಕ್ಷಕಿ ಶಾಲೆಗಳ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಪಟ್ಟಿಯ ನಂತರದ ಸ್ಥಾನಗಳಲ್ಲಿ ಬೆಂಗಳೂರು (39), ವಿಜಯನಗರ (45) ಮತ್ತು ಗದಗ (46) ಜಿಲ್ಲೆಗಳಿವೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಾರಣದಿಂದಲೇ ಏಕ ಶಿಕ್ಷಕ/ಶಿಕ್ಷಕಿ ಇರುವ ಶಾಲೆಗಳ ಸಂಖ್ಯೆ ಏರಿಕೆಯಾಗಿದೆ ಎಂಬುದು ಇಲಾಖೆಯ ಅಧಿಕಾರಿಯೊಬ್ಬರು ನೀಡುವ ವಿವರಣೆ. ಈ ಕೊರತೆಯನ್ನು ನೀಗಿಸಲೆಂದೇ 2025–26ನೇ ಸಾಲಿನಲ್ಲಿ ಇಲಾಖೆಯು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, 2024–25ನೇ ಸಾಲಿಗೆ ಹೋಲಿಸಿದರೆ ಅತಿಥಿ ಶಿಕ್ಷಕರ ಸಂಖ್ಯೆಯಲ್ಲೂ 6,000ದಷ್ಟು ಏರಿಕೆಯಾಗಿದೆ.

ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದ ಮಧು ಬಂಗಾರಪ್ಪ. ‘ಒಳಮೀಸಲಾತಿ ಕಾರಣಕ್ಕೆ ಶಿಕ್ಷಕರ ನೇಮಕಾತಿ ವಿಳಂಬವಾಗಿತ್ತು. ಈಗ ಒಳ ಮೀಸಲಾತಿ ಸಮಸ್ಯೆ ಬಗೆಹರಿದಿದೆ. ಶೀಘ್ರವೇ ನೇಮಕಾತಿ ನಡೆಸಲಾಗುವುದು’ ಎಂದಿದ್ದರು.

‘ಏಕಶಿಕ್ಷಕ/ಶಿಕ್ಷಕಿ ಇರುವ ಶಾಲೆಗಳ ಪೈಕಿ ಬಹುತೇಕವು ಪ್ರಾಥಮಿಕ ಹಂತದವು. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ 30ಕ್ಕಿಂತಲೂ ಹೆಚ್ಚು ಇದೆ. ಅಂತಹ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಒಟ್ಟಿಗೇ ಕೂರಿಸಿ ಪಾಠಮಾಡಬೇಕಾದ ಸ್ಥಿತಿ ಇದೆ. ಒಬ್ಬರೇ ಶಿಕ್ಷಕರು ಅಷ್ಟು ಮಕ್ಕಳನ್ನು ನಿರ್ವಹಣೆ ಮಾಡುವುದು ಕಷ್ಟ’ ಎಂಬುದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಕಳವಳ.

ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ, ‘ಐದು ತರಗತಿಗಳ ಮಕ್ಕಳನ್ನು ಒಂದೆಡೆಯೇ ಕೂರಿಸಿ ಪಾಠ ಮಾಡುವುದರಿಂದ, ಮಕ್ಕಳ ಕಲಿಕೆಗೂ ತೊಡಕಾಗುತ್ತದೆ. ಸರ್ಕಾರವು ಕೂಡಲೇ ಇಂತಹ ಶಾಲೆಗಳಗೆ ಮತ್ತೊಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

188 ಶಾಲೆಗಳಲ್ಲಿ ಮಕ್ಕಳಿಲ್ಲ

ರಾಜ್ಯದ ವಿವಿಧ ಜಿಲ್ಲೆಗಳ 188 ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲ ಎಂಬ ವಿವರವನ್ನು ಮಧು ಬಂಗಾರಪ್ಪ ಅವರು ಸದನದ ಮುಂದೆ ಇರಿಸಿದ್ದರು.

188ರ ಪೈಕಿ 166 ಕಿರಿಯ ಪ್ರಾಥಮಿಕ, 25 ಹಿರಿಯ ಪ್ರಾಥಮಿಕ ಮತ್ತು 3 ಪ್ರೌಢ ಶಾಲೆಗಳು ಸೇರಿವೆ. ಶೂನ್ಯ ದಾಖಲಾತಿಯ ಅತಿಹೆಚ್ಚು ಶಾಲೆಗಳು ತುಮಕೂರು (45), ಕಲಬುರ್ಗಿ (21), ಕೋಲಾರ (20), ಕೊಪ್ಪಳ (18) ಮತ್ತು ಬೀದರ್ (17) ಜಿಲ್ಲೆಗಳಲ್ಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.