ಹೆಚ್ಚುವರಿ ಶಿಕ್ಷಕರ ನಿಯುಕ್ತಿ, ಮುಖ್ಯಶಿಕ್ಷಕರು, ಸಹ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ, ಜಿಲ್ಲಾ, ವಿಭಾಗೀಯ ಹಂತದ ವರ್ಗಾವಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳೂ ಜುಲೈ 31ರ ಒಳಗೆ ಪೂರ್ಣಗೊಳ್ಳಲಿವೆ ಎಂದು ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020 ಜಾರಿಗೊಳಿಸಿ, ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿತ್ತು. ಸುಮಾರು 80 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, 10,500 ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿ ಗೊಂದಲ, ವಿಧಾನಸಭಾ ಚುನಾವಣೆಯಿಂದಾಗಿ ವರ್ಗಾವಣಾ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.
ವರ್ಗಾವಣೆ ಪ್ರಕಾರ;ಅವಧಿ
ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸೆಲಿಂಗ್;ಜೂನ್ 6ರಿಂದ ಜೂನ್ 22ರವರೆಗೆ
ತಾಂತ್ರಿಕ ಸಹಾಯಕ ಶಿಕ್ಷಕರು/ಅಧಿಕಾರಿಗಳು;ಜೂನ್ 8ರಿಂದ ಜೂನ್ 26ರವರೆಗೆ
ಸಾಮಾನ್ಯ ಕೋರಿಕೆ ವರ್ಗಾವಣೆಗಳು;ಜೂನ್ 7ರಿಂದ ಜುಲೈ 31ರವರೆಗೆ
ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್;ಜುಲೈ 10ರಿಂದ ಜುಲೈ 17ರವರೆಗೆ
ವಿಭಾಗೀಯ ಹಂತದ ವರ್ಗಾವಣೆ;ಜುಲೈ 17ರಿಂದ ಜುಲೈ 26ರವರೆಗೆ
ಅಂತರ್ ವಿಭಾಗೀಯ ವರ್ಗಾವಣೆಗಳು;ಜುಲೈ 25ರಿಂದ ಜುಲೈ 31ರವರೆಗೆ