ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KEA ಪರೀಕ್ಷೆ ಬ್ಲೂಟೂತ್ ಪ್ರಕರಣ; ಏಳು ಆರೋಪಿಗಳು ಪೊಲೀಸ್ ವಶಕ್ಕೆ

Published 3 ನವೆಂಬರ್ 2023, 6:52 IST
Last Updated 3 ನವೆಂಬರ್ 2023, 6:52 IST
ಅಕ್ಷರ ಗಾತ್ರ

ಕಲಬುರಗಿ: ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಕೆಇಎ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿ ಬಂಧಿತರಾದ ಏಳು ಜನರನ್ನು ಪೊಲೀಸರ ತಮ್ಮ ವಶಕ್ಕೆ ಪಡೆದಿದ್ದಾರೆ.

ಅಭ್ಯರ್ಥಿಗಳಾದ ಬೀದರ್‌ ಮೂಲದ ಆಕಾಶ ಮಂಠಾಳೆ, ಸಂತೋಷ ಬಂಡೆಪ್ಪ ಯಾಳಗಿ ಮತ್ತು ಬಾಬು ಚಾಂದಶೇಖ್‌, ಅಭ್ಯರ್ಥಿಗಳಿಗೆ ನೆರವಾಗಲು ಬಂದಿದ್ದ ವಿಜಯಕುಮಾರ ಬಿರಾದಾರ, ಖಾಸಗಿ ಶಾಲೆಯ ಶಿಕ್ಷಕ ಬಾಪು ಗುತ್ತಪ್ಪ ಯಾಳಗಿ ಮತ್ತು ಗಣೇಶ್‌ ದುಂಡಪ್ಪನನ್ನು ಬಂಧಿಸಿದ್ದ ಅಫಜಲಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಏಳು ಆರೋಪಿಗಳನ್ನು ಎಂಟು ದಿನಗಳ ಮಟ್ಟಿಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ಬ್ಲೂಟೂತ್ ಡಿವೈಸ್ ಕೊಟ್ಟವರು ಯಾರು? ಎಷ್ಟು ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು? ಅಕ್ರಮದಲ್ಲಿ ಇನ್ನು ಯಾರೆಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT