ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೊನಿಕ್ಸ್)ದ ವತಿಯಿಂದ ₹2.42 ಕೋಟಿಲಾಭಾಂಶವನ್ನು ಸರ್ಕಾರಕ್ಕೆ ಪಾವತಿಸಲಾಯಿತು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ ಅವರ ಮೂಲಕ ಮುಖ್ಯಮಂತ್ರಿ ಸಿ.ಎಂ.ಯಡಿಯೂರಪ್ಪ ಅವರಿಗೆ ಸೋಮವಾರ ಚೆಕ್ ಹಸ್ತಾಂತರಿಸಲಾಯಿತು. ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸಿದ್ದರಾಮಪ್ಪ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿರಮಣ ರೆಡ್ಡಿ ಇದ್ದರು.

‘ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಕಿಯೊನಿಕ್ಸ್ ಮಾಹಿತಿ ತಂತ್ರಜ್ಞಾನ ಶಿಕ್ಷಣ ಸೇವೆ, ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಮಾರಾಟ, ತಂತ್ರಾಂಶ ಒದಗಿಸುವಿಕೆ ಮತ್ತು ಸೇವೆ ಮುಂತಾದ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ. ನಿಗಮವು 2019-20ನೇ ಸಾಲಿನಲ್ಲಿ ₹592.19 ಕೋಟಿ ವ್ಯವಹಾರ ನಡೆಸಿದ್ದು, ತೆರಿಗೆ ಪೂರ್ವದ ಲಾಭ ಗಳಿಕೆಯು ₹21.06 ಕೋಟಿ ಆಗಿದೆ. ನಿಗಮದ ₹100 ಮುಖಬೆಲೆಯ 30,27,200 ಷೇರುಗಳನ್ನು ರಾಜ್ಯ ಸರ್ಕಾರ ಹೊಂದಿದೆ’ ಎಂದು ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.

ಈಕ್ವಿಟಿ ಷೇರುಗಳ ಮೌಲ್ಯದಂತೆ ಸಂದಾಯಿತ ಷೇರು ಬಂಡವಾಳದ ಮೊತ್ತ ₹30.27 ಕೋಟಿಗೆ ₹2.42 ಕೋಟಿ ಲಾಭಾಂಶ ಘೋಷಿಸಿ ಸರ್ಕಾರಕ್ಕೆ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.