ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಾಲಯಗಳ ರಕ್ಷಣೆಗೆ ಕಾನೂನು ಹೋರಾಟ: ಪೇಜಾವರ ಶ್ರೀ

Published 6 ಜೂನ್ 2024, 12:45 IST
Last Updated 6 ಜೂನ್ 2024, 12:45 IST
ಅಕ್ಷರ ಗಾತ್ರ

ಬೆಳಗಾವಿ: ‘ಮಸೀದಿಗಳಾಗಿ ಮಾರ್ಪಾಡು ಮಾಡಲಾದ ಕಾಶಿ ಮತ್ತು ಮಥುರಾ ದೇವಾಲಯಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ ಪ್ರಗತಿಯಲ್ಲಿದೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

‘ಬೀದಿಯಲ್ಲಿ ಹೋರಾಡುವುದಕ್ಕಿಂತ ಕಾನೂನು ಹೋರಾಟ ಉತ್ತಮ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವ ಕಾರಣ ಅದನ್ನು ಅನುಸರಿಸಿದ್ದೇವೆ. ದೇವಾಲಯಗಳನ್ನು ಹಿಂಪಡೆಯುವ ನಮ್ಮ ಹೋರಾಟ ಸಮರ್ಥನೀಯ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಈ ಹಿಂದೆ ನಮಗೆ ಆದ ಅನ್ಯಾಯ ಈಗಲಾದರೂ ಸರಿಪಡಿಸಬೇಕಿದೆ. ನ್ಯಾಯಯುತ ಹೋರಾಟದಲ್ಲಿ ಜಯ ಸಿಗಬೇಕಿದೆ. ಅಯೋಧ್ಯೆಯ ರಾಮ ಮಂದಿರ ಪ್ರಕರಣದಲ್ಲಿ ಕಾನೂನಿನ ಮೂಲಕವೇ ನಮಗೆ ನ್ಯಾಯ ಸಿಕ್ಕಿದೆ’ ಎಂದು ಹೇಳಿದರು.

ಹಿಂದೂ ದೇವಾಲಯಗಳ ಸಂಪನ್ಮೂಲವನ್ನು ಇತರೆ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಬಳಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೂ ದೇವಾಲಯಗಳನ್ನು ಮಾತ್ರ ಶೋಷಣೆಗೆ ಗುರಿಪಡಿಸಲಾಗಿದೆ. ಅದು ಸ್ವೀಕಾರಾರ್ಹವಲ್ಲ. ಎಲ್ಲ ಧರ್ಮಗಳಿಗೂ ಒಂದೇ ರೀತಿಯ ನಿಲುವು ತಳೆಯಬೇಕು’ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿರುವ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಅಲ್ಲಿ ಅಭ್ಯರ್ಥಿ ಆಯ್ಕೆ ತಪ್ಪಾಗಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಸೋತಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT