ಬೆಂಗಳೂರು:ಲಿಂಗನಮಕ್ಕಿಯಿಂದನೀರು ತರಿಸಲು ಡಿಪಿಆರ್ ಮಾಡಿಸಲಾಗುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ವಾಣಿವಿಲಾಸದಿಂದಬೆಂಗಳೂರಿಗೆ ನೀರು ತರಲು ಮಾರ್ಗ ಗುರುತಿಸಲಾಗಿದೆಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಡಾ.ಬಾಬು ಜಗಜೀವನ್ರಾಮ್ ಅವರ 33 ನೇ ಪುಣ್ಯ ಸ್ಮರಣೆ ದಿನದಂದು ವಿಧಾನಸೌಧದ ಎದುರು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ. ಬಾಬು ಜಗಜೀವನ್ ರಾಮ್ ಅವರ ಹಸಿರು ಕ್ರಾಂತಿ ಮೂಲಕ ನಮ್ಮ ದೇಶ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ ಎಂದು ಅವರುಹೇಳಿದರು.

ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಕೃಷಿ ಹಾಗೂ ರಕ್ಷಣಾ ಸಚಿವರಾಗಿದ್ದ ವೇಳೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃಷಿ ಕ಼್ಷೇತ್ರದಲ್ಲಿ ಅತಿದೊಡ್ಡ ಬದಲಾವಣೆ ತಂದು, ಹಸಿರು ಕ್ರಾಂತಿಗೆ ಕಾರಣರಾದವರು. ನಮ್ಮ ದೇಶ ಆಹಾರಧಾನ್ಯದಲ್ಲಿ ಸ್ವಾವಲಂಬಿಯಾಗಿದೆ. ಇದಕ್ಕೆ ಇವರು ಹಾಕಿಕೊಟ್ಟ ನೀತಿಗಳೇ ಕಾರಣ ಎಂದರು.

ಸದಾಶಿವ ಆಯೋಗದ ಬಗ್ಗೆ ಸರಕಾರ ಗಮನ ಹರಿಸಿದೆ. ಜನರ ಆಶಯದಂತೆ ಸರಕಾರ ನಡೆದುಕೊಳ್ಳಲಿದೆ. ಇದರ ಹಾದಿಯಲ್ಲಿ ಸರಕಾರ ಸಾಗುತ್ತಿದೆ ಎಂದರು.

ಕೆಆರ್ಎಸ್ನಲ್ಲಿ ಕೇವಲ 80 ಅಡಿ ನೀರಿದ್ದು, ಒಂದು ತಿಂಗಳ ಅವಧಿಗೆ ಮಾತ್ರ ಬೆಂಗಳೂರಿಗೆ ನೀರು ಹರಿಸಲು ಸಾಧ್ಯ. ಮಳೆ ಬಾರದೆ, ಒಳಹರಿವು ಹೆಚ್ಚಾಗದೇಬೆಂಗಳೂರಿಗೆ ನೀರು ಸಿಗುವುದೇ ಕಷ್ಟವಾಗಿದೆ. ಲಿಂಗನಮಕ್ಕಿಂದ ನೀರು ತರಿಸಲು ಡಿಪಿಆರ್ ಮಾಡಿಸಲಾಗುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ವಾಣಿವಿಲಾಸದಿಂದಬೆಂಗಳೂರಿಗೆ ನೀರು ತರಲು ಮಾರ್ಗ ಗುರುತಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.