ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾಲು | ಕೇಂದ್ರ ರಾಜ್ಯ; ಜೋರು ವ್ಯಾಜ್ಯ

Published 6 ಏಪ್ರಿಲ್ 2024, 23:58 IST
Last Updated 6 ಏಪ್ರಿಲ್ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆಎಂಬ ಕೂಗನ್ನು ರಾಜ್ಯ ಸರ್ಕಾರವೇ ಎಬ್ಬಿಸಿದೆ. ಅನ್ಯಾಯ ಮಾಡಿಲ್ಲ; ನ್ಯಾಯಯುತ ಪಾಲು ನೀಡಲಾಗಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ.

ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರದ ವಾದವನ್ನು ಒಂದೇ ವೇದಿಕೆಯಲ್ಲಿ ಆಲಿಸುವುದಕ್ಕಾಗಿ ಜಾಗೃತ ಕರ್ನಾಟಕ ಹಾಗೂ ರೈತ ಸಂಘಟನೆಗಳು ಶನಿವಾರ ಬಹಿರಂಗ ಚರ್ಚೆ ಹಮ್ಮಿಕೊಂಡಿದ್ದವು. ಕೇಂದ್ರದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಆಹ್ವಾನ ನೀಡಲಾಗಿದೆ ಎಂದು ಸಂಘಟಕರು ಹೇಳಿದ್ದರು.

ಬಹಿರಂಗ ಚರ್ಚೆಯಲ್ಲಿ ಭಾಗವಹಿಸದ ನಿರ್ಮಲಾ, ಅದಕ್ಕೂ ಮೊದಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೆರಿಗೆ ಪಾಲು, ಅನುದಾನದ ಹಂಚಿಕೆ ಸೇರಿದಂತೆ ಹಲವು ವಿಷಯಗಳಕುರಿತ ಮಾಹಿತಿ ನೀಡಿದರು. ಕೃಷ್ಣಬೈರೇಗೌಡ ಬಹಿರಂಗ ಚರ್ಚೆಯಲ್ಲಿ ರಾಜ್ಯದ ವಾದ ಮಂಡಿಸಿದರು. ನಿರ್ಮಲಾ ಅವರಿಗಾಗಿ ಕಾಯ್ದಿರಿಸಿದ್ದ ಕುರ್ಚಿ ಕೊನೆಯವರೆಗೂ ಇತ್ತು.

ನಿರ್ಮಲಾ ವಾದವೇನು?

  • ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕ ಮಾತ್ರವಲ್ಲ ತೆಲಂಗಾಣ, ಮಿಜೋರಾಂ ರಾಜ್ಯಗಳಿಗೂ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಅಂತಿಮ ವರದಿಯಲ್ಲಿ ಆ ವಿಷಯವೇ ಇಲ್ಲದ ಕಾರಣ ಎರಡೂ ರಾಜ್ಯಗಳು ಕೇಳಿಲ್ಲ.

  • ರಾಜ್ಯ ಸರ್ಕಾರಗಳು ಬಂಡವಾಳ ವೆಚ್ಚ ಮಾಡಲು ಕೇಂದ್ರ ಸರ್ಕಾರ ನೆರವು ಕೊಡಬೇಕೆಂಬ ಶಿಫಾರಸು ಹಣಕಾಸು ಆಯೋಗದ ವರದಿಯಲ್ಲಿ ಇರಲಿಲ್ಲ. ಆದರೆ,ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರದಂತೆ 50 ವರ್ಷಗಳ ಮರುಪಾವತಿ ಅವಧಿಗೆ ರಾಜ್ಯಗಳಿಗೆ ಬಡ್ಡಿರಹಿತಸಾಲ ನೀಡಲಾಗಿದೆ. ಕರ್ನಾಟಕಕ್ಕೆ ₹ 8,035 ಕೋಟಿ ಬಡ್ಡಿರಹಿತ ಸಾಲ ದೊರಕಿದೆ.

  • ಈಗ ಹೊಸ ಹಣಕಾಸು ಆಯೋಗ ಅಸ್ತಿತ್ವದಲ್ಲಿದೆ.ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳ ಅಹವಾಲು
    ಗಳನ್ನು ಆಯೋಗ ಆಲಿಸುತ್ತದೆ. ರಾಜ್ಯ ಸರ್ಕಾರ ತನ್ನ ವಾದವನ್ನು ಆಯೋಗದ ಮುಂದೆ ಮಂಡಿಸಿ,
    ಪರಿಹಾರ ಪಡೆಯಲು ಅವಕಾಶ ಇದೆ.

ಕೃಷ್ಣ ಬೈರೇಗೌಡ ವಾದವೇನು?

  • ಕೇಂದ್ರದ ತೆರಿಗೆ ಪಾಲಿನ ಅನುದಾನವನ್ನು 15ನೇ ಹಣಕಾಸು ಆಯೋಗ ಶೇ 4.731ರಿಂದ ಶೇ 3.617ಕ್ಕೆ (ಶೇ 23) ಇಳಿಸಿದೆ. ಇದರ ಪರಿಣಾಮ ಪ್ರತಿವರ್ಷ ₹12 ಸಾವಿರದಿಂದ ₹13 ಸಾವಿರ ಕೋಟಿ ನಷ್ಟವಾಗುತ್ತಿದೆ. 15ನೇ ಹಣಕಾಸು ಆಯೋಗದ ಅವಧಿ 2026ರ ವರೆಗಿದ್ದು ಕನಿಷ್ಠ ₹62,098 ಕೋಟಿ ನಷ್ಟವಾಗುತ್ತದೆ.

  • ದೇಶದಲ್ಲಿ ತೆರಿಗೆ ಪಾವತಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದ್ದರೂ ಕೇಂದ್ರ ಸರ್ಕಾರ ದೊಡ್ಡ ಬರೆ ಹಾಕುತ್ತಿದೆ. 

  • ಕೇಂದ್ರಕ್ಕೇ ಸೆಸ್‌–ಸರ್‌ಚಾರ್ಜ್‌ ಹೋಗುತ್ತಿದ್ದು, ರಾಜ್ಯಕ್ಕೆ ಇದರಿಂದ ₹ 53,382 ಕೋಟಿ ನಷ್ಟವಾಗಿದೆ. ವಿಶೇಷ ಅನುದಾನದಲ್ಲಿ ₹ 11,495 ಕೋಟಿ ಸಹ ಲಭಿಸಿಲ್ಲ.

  • ಜಿಎಸ್‌ಟಿ, ಹಣಕಾಸು ಆಯೋಗದಿಂದ ಅನುದಾನ ಕಡಿತ, ಸೆಸ್‌ ಹಾಗೂ ಸರ್ಚಾಜ್‌, ವಿಶೇಷ ಅನುದಾನದಲ್ಲಿ ಒಟ್ಟಾರೆ ರಾಜ್ಯಕ್ಕೆ ₹ 1,85,468 ಕೋಟಿ ನಷ್ಟವಾಗಿದೆ. 

  • ಕೇಂದ್ರದ ಹಲವು ಯೋಜನೆಗಳಿಗೆ ರಾಜ್ಯವು ಶೇ 50ಕ್ಕಿಂತ ಹೆಚ್ಚಿನ ಅನುದಾನ ನೀಡುತ್ತಿದೆ. ಆದರೆ, ಎಲ್ಲ ಯೋಜನೆಗಳಿಗೂ ಪ್ರಧಾನಿ ಅವರ ಹೆಸರನ್ನೇ ನಾಮಕರಣ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT