ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಭೂಕುಸಿತದಲ್ಲಿ 9 ಮಂದಿ ಕಣ್ಮರೆ

Last Updated 24 ಆಗಸ್ಟ್ 2018, 16:10 IST
ಅಕ್ಷರ ಗಾತ್ರ

ಮಡಿಕೇರಿ: ಭೂಕುಸಿತ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಇನ್ನೂ 9 ಮಂದಿ ಕಣ್ಮರೆಯಾಗಿದ್ದಾರೆ. ಅವರಿಗಾಗಿ ರಕ್ಷಣಾ ಸಿಬ್ಬಂದಿ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಮಾಹಿತಿ ನೀಡಿದರು.

‘ಕಾರ್ಯಾಚರಣೆಗೆ ಹವಾಮಾನ ಸಹಕಾರ ನೀಡುತ್ತಿಲ್ಲ. ಮಳೆ, ಮಂಜು ಮುಸುಕಿದರೆ ಡ್ರೋನ್‌ ಕಾರ್ಯಾಚರಣೆಯೂ ಸಾಧ್ಯವಾಗುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಕಾಟಕೇರಿಯಲ್ಲಿ ಗಿಲ್ಬರ್ಟ್‌ (59), ಹೆಬ್ಬಟ್ಟಗೇರಿ ಚಂದ್ರಪ್ಪ (59), ಹೆಬ್ಬಾಲೆ ಹರೀಶ್‌ ಕುಮಾರ್‌ (42), ಮುವತ್ತೊಕ್ಲು ಗ್ರಾಮದ ಸಾಬು ಉತ್ತಪ್ಪ (62), ಹಾಡಿಗೇರಿ ಗ್ರಾಮದ ಫ್ರಾನ್ಸಿಸ್‌ (47), ಮಕ್ಕಂದೂರಿನ ಉದಯಗಿರಿಯ ಬಾಬು (56), ಜೋಡುಪಾಲದ ಗೌರಮ್ಮ (53), ಮಂಜುಳಾ (15), ಕಾಲೂರು ಗ್ರಾಮದ ಗಗನ್ ಗಣಪತಿ (7) ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮಳೆಯಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ನಾಪತ್ತೆಯಾದವರ ಪತ್ತೆಗೆ ಗರುಡಾ ಪಡೆ ಬಳಕೆ ಮಾಡಿಕೊಳ್ಳಲಾಗಿದೆ. 41 ಪರಿಹಾರ ಕೇಂದ್ರಗಳಲ್ಲೂ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT