ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಸಾಧಕರಿಗೆ ಮಾಸ್ತಿ ಪ್ರಶಸ್ತಿ

Last Updated 12 ಮೇ 2022, 3:26 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್ ಟ್ರಸ್ಟ್‌ವತಿಯಿಂದ ನೀಡಲಾಗುವ 2022ನೇ ಸಾಲಿನ ಮಾಸ್ತಿ ಪ್ರಶಸ್ತಿಗೆಏಳು ಸಾಧಕರು ಆಯ್ಕೆಯಾಗಿದ್ದಾರೆ.

ನಾಡಿನ ಖ್ಯಾತ ಸಾಹಿತಿಗಳಾದ ಡಾ.ಕೆ.ವಿ. ನಾರಾಯಣ (ಭಾಷಾ ವಿಜ್ಞಾನ), ಡಾ.ಓ.ಎಲ್‌. ನಾಗಭೂಷಣಸ್ವಾಮಿ (ಅನುವಾದ), ಶಶಿಕಲಾ ವಸ್ತ್ರದ (ಕಾವ್ಯ), ರಾಘವೇಂದ್ರ ಪಾಟೀಲ (ಕಥೆ), ಚಂದ್ರಶೇಖರ ನಂಗಲಿ (ವಿಮರ್ಶೆ) ಹಾಗೂ ಹುಣಸವಾಡಿ ರಾಜನ್‌ (ಪತ್ರಿಕೋದ್ಯಮ), ‘ಪ್ರಜಾವಾಣಿ‘ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ (ಅಂಕಣ ಸಾಹಿತ್ಯ) ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಸಂದಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ತಿಳಿಸಿದ್ದಾರೆ.

ಪ್ರಶಸ್ತಿಯು ಫಲಕ ಮತ್ತು ₹ 25 ಸಾವಿರ ನಗದು ಒಳಗೊಂಡಿದೆ. ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಾವಿನಕೆರೆ ರಂಗನಾಥನ್‌, ಸದಸ್ಯರಾಗಿ ಪ್ರೊ.ಎಂ.ಎಚ್‌. ಕೃಷ್ಣಯ್ಯ, ಜಿ.ಎನ್‌. ರಂಗನಾಥರಾವ್‌, ಬಿ.ಆರ್‌. ಲಕ್ಷ್ಮಣರಾವ್‌, ಬಿ.ಎಸ್‌. ವೆಂಕಟಾಚಲಪತಿ, ಕೆ. ರಮೇಶ್‌, ಉಷಾ ಕೇಸರಿ ಹಾಗೂ ಸದಸ್ಯ ಕಾರ್ಯದರ್ಶಿ ಎನ್‌. ನರೇಂದ್ರ ಬಾಬು ಇದ್ದರು.

ಜೂನ್‌ 18ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT