ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದವರನ್ನು ಭೇಟಿ ಮಾಡಲು ಮೋದಿಗೆ ಸಮಯ ಇದೆ, ಸಿದ್ದಗಂಗೆಗೆ ಬರಲು ಸಮಯವಿಲ್ಲ!

Last Updated 23 ಜನವರಿ 2019, 13:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ಮೋದಿಯವರಿಗೆ ಸೆಲೆಬ್ರಿಟಿಗಳ ಮದುವೆಗೆ ಹೋಗಲು, ಸಿನಿಮಾ ನಟರನ್ನು ಭೇಟಿ ಮಾಡಲು ಸಮಯವಿದೆ.ಆದರೆ ಬಡವರ ಒಳಿತಿಗಾಗಿ ದುಡಿದ ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಬರಲು ಸಮಯವಿಲ್ಲ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂಬ ಒತ್ತಾಯವನ್ನೂ ಯಾರೂ ಪರಿಗಣಿಸಿಲ್ಲ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿಯವರು ಬರಲೇ ಬೇಕಿತ್ತು.ಇಂಥವರ ಅಂತಿಮ ದರ್ಶನಕ್ಕೆ ಮೋದಿ ಬರುತ್ತಿದ್ದರೆ ಅದು ದೊಡ್ಡ ಸಂಗತಿಯೇ ಆಗುತ್ತಿತ್ತು ಎಂದು ಹೇಳಿದ ಸಚಿವರು, ರಾಹುಲ್ ಗಾಂಧಿ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಯಾವುದೇ ಸ್ಥಾನದಲ್ಲಿಲ್ಲ, ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾಗಿರುತ್ತಿದ್ದರೆ ನೀವು ಟೀಕಿಸುವುದು ಸರಿ ಇದೆ ಎಂದು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT