ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಕೈಗೊಂಡ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮೂವರು ಮಹಿಳೆಯರು ಬ್ಯಾಂಕ್ ನೀಡುವ ‘ಮಹಿಳಾ ಸಾಧಕಿಯರು’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪುರಸ್ಕೃತರ ವಿವರ
ಅಂಬಿಕಾ:ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಹುಚ್ಚಹನುಮೇಗೌಡನ ಗೌಡನ ಪಾಳ್ಯದ ಅಂಬಿಕಾ ಐದು ಎಕರೆ ಒಣಭೂಮಿಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಅವರ ಜಮೀನಿನಲ್ಲಿ 500 ಅಡಿಗಳಷ್ಟು ಆಳ ಕೊರೆದರೂ ಸಮರ್ಪಕವಾಗಿ ನೀರು ಸಿಗಲಿಲ್ಲ. ನಬಾರ್ಡ್ನ ತರಬೇತಿ ಪಡೆದ ಅವರು ಅಲ್ಲಿನ ಆಲೋಚನೆಗಳನ್ನು ಜಾರಿಗೆ ತಂದರು. ಗೋಬರ್ ಅನಿಲ ಸ್ಥಾವರ, ಎರೆಹುಳು ಗೊಬ್ಬರ ಘಟಕ ಸ್ಥಾಪಿಸಿದ್ದಾರೆ. ಹೊಸ ಪದ್ಧತಿಯಿಂದಾಗಿ ಅವರು ವಾರ್ಷಿಕ ಸರಾಸರಿ ₹ 3.50 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಭಾಗ್ಯಮ್ಮ: ಚಿತ್ರದುರ್ಗ ಜಿಲ್ಲೆ ಕವಳನಹಳ್ಳಿ ಗ್ರಾಮದ ಭಾಗ್ಯಮ್ಮ ಅಲ್ಲಿನ ಮಲ್ಲಿಯಮ್ಮದೇವಿ ಹಳ್ಳ ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನಾ ಸಮಿತಿಯ ಕಾರ್ಯದರ್ಶಿ. ಇಲ್ಲಿ ಯೋಜನೆ ಪೂರ್ಣಗೊಂಡ ಬಳಿಕ ಆ ಪ್ರದೇಶದ ನೀರಾವರಿ ವ್ಯವಸ್ಥೆಯ ಚಿತ್ರಣವೇ ಬದಲಾಗಿದೆ. ಜನರನ್ನು ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು, ಜಾಗೃತಿ ಮೂಡಿಸುವುದರಲ್ಲಿ ಸಕ್ರಿಯರಾಗಿದ್ದರು. ಹನಿ ನೀರಾವರಿ, ಆಳ ಉಳುಮೆ, ಬಂಡು ನಿರ್ಮಾಣದ ಕುರಿತು ಸ್ಥಳೀಯರಿಗೆ ತರಬೇತಿ ನೀಡಿದ್ದರು. ನಾಯಕನಹಟ್ಟಿ ರೈತ ಉತ್ಪಾದಕ ಸಂಘದ ಉಪಾಧ್ಯಕ್ಷೆಯಾಗಿದ್ದಾರೆ.

ಇಂದಿರಾ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಜೋಬಿಗೇನಹಳ್ಳಿಯವರಾದ ಇಂದಿರಾ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಪಿಲೆಗಿನಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆ. ಸೂಕ್ಷ್ಮ ಉದ್ದಿಮೆದಾರರಿಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಜೋಬಿಗೇನಹಳ್ಳಿ ಜಲಾನಯನ ಯೋಜನೆಯಲ್ಲಿ ತರಬೇತಿ ಪಡೆದಿದ್ದಾರೆ. ಇವರು ರೈತ ಉತ್ಪಾದಕ ಸಂಘದ ಸದಸ್ಯೆಯೂ ಹೌದು.

ಮಾರ್ಚ್ 12ರಂದು ಮಧ್ಯಾಹ್ನ 12ಕ್ಕೆ ನಗರದ ಕೆ.ಜಿ.ರಸ್ತೆಯಲ್ಲಿರುವ ನಬಾರ್ಡ್ ಕಚೇರಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.