ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುಹಿಂಸೆ: ಸಂತ್ರಸ್ತರ ರಕ್ಷಣೆಗೆ ಕಾನೂನು ರೂಪಿಸಿ

ಕೋಮುಹಿಂಸೆ: ಮುಸ್ಲಿಂ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ
Last Updated 1 ಜೂನ್ 2022, 19:49 IST
ಅಕ್ಷರ ಗಾತ್ರ

ಮಂಗಳೂರು: ಕೋಮುಹಿಂಸೆಯ ಸಂತ್ರಸ್ತರಿಗೆ ರಕ್ಷಣೆ, ಪರಿಹಾರ, ಪುನರ್ವಸತಿ ಖಾತರಿ ಪಡಿಸುವ ಕಾನೂನು ರೂಪಿಸಬೇಕು ಹಾಗೂ ಮುಸ್ಲಿಂ ಅಲ್ಪಸಂಖ್ಯಾತರ ಶಿಕ್ಷಣ, ವಸತಿ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಅವರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಸರ್ಕಾರ ಅನುದಾನ ಮೀಸಲಿಡಬೇಕು ಎಂದು ಮುಸ್ಲಿಂ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಸಿಪಿಎಂನ ರಾಜ್ಯ ಸಮಿತಿಯು ನಗರದಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾವೇಶದ ಕೊನೆಯ ದಿನವಾದ ಬುಧವಾರ ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ, ಪರಿಹಾರ, ಪುನರ್ವತಿ, ಸಬಲೀಕರಣಕ್ಕೆ ಸಂಬಂಧಿಸಿದ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು‌.

‘ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ಪ್ರಧಾನವಾಗಿ ಮುಸ್ಲಿಂ ಸಮುದಾಯ ಕೋಮು ಹಿಂಸೆಗಳಿಂದ ಜರ್ಜರಿತಗೊಂಡಿದೆ. ಕೋಮು ಹಿಂಸೆಗೆ ಗುರಿಯಾಗುತ್ತಿರುವ ಅಲ್ಪಸಂಖ್ಯಾತ ಸಂತ್ರಸ್ತರಿಗೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ರಕ್ಷಣೆ ದೊರಕುತ್ತಿಲ್ಲ. ಪರಿಹಾರವನ್ನೂ ನೀಡದೇ ತಾರತಮ್ಯ ಎಸಗಲಾಗುತ್ತಿದೆ. ಈ ಕಳವಳಕಾರಿ ಬೆಳವಣಿಗೆ
ಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳು ಆತಂಕವನ್ನು ಎದುರಿ ಸುತ್ತಿವೆ. ಇಂತಹ ಅನಾದರ, ಅಸಹಿ ಷ್ಣುತೆ, ತಾರತಮ್ಯಗಳು ದೇಶದ ಘನತೆಗೆ ತಕ್ಕುದಲ್ಲ’.

‘ಸಾಚಾರ್ ಸಮಿತಿ ಹಾಗೂ ರಂಗನಾಥ ಮಿಶ್ರ ಸಮಿತಿಗಳ ವರದಿ ಪ್ರಕಾರ ಮುಸ್ಲಿಮರು ಅತ್ಯಂತ ಹಿಂದು ಳಿದಿರುವ ಸಮುದಾಯ. ಅವರ ಏಳಿಗೆಗಾಗಿ ಈ ಸಮಿತಿಗಳು ಹಲವು ಶಿಫಾರಸುಗಳನ್ನು ಮಾಡಿವೆ. ಈ ಶಿಫಾರಸುಗಳು ಮೂಲೆಗುಂಪಾಗಿದೆ. ದೇಶದ ಜನ ಸಂಖ್ಯೆಯ ಶೇ 15 ರಷ್ಟಿರುವ ಸಮುದಾಯವೊಂದನ್ನು ಸಬಲೀಕರಣಗೊಳಿಸುವುದು ದೇಶದ ಒಟ್ಟು ಅಭಿವೃದ್ದಿಯ ದೃಷ್ಟಿಯಲ್ಲೂ ಪ್ರಧಾನವಾದುದು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT