ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್ ಸಂಸ್ಥೆಗೆ ನೀಡಿರುವ 544 ಎಕರೆ ಜಮೀನು ಮರಳಿ ಪಡೆಯಲು ಸರ್ವೆ ನಂಬರ್‌ ಸಮಸ್ಯೆ

Published 5 ಡಿಸೆಂಬರ್ 2023, 14:36 IST
Last Updated 5 ಡಿಸೆಂಬರ್ 2023, 14:36 IST
ಅಕ್ಷರ ಗಾತ್ರ

ಬೆಳಗಾವಿ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೈಸ್‌ ಸಂಸ್ಥೆಗೆ ನೀಡಿರುವ 544 ಎಕರೆ ಹೆಚ್ಚುವರಿ ಜಮೀನು ಮರಳಿ ಪಡೆಯಲು ಸರ್ವೆ ನಂಬರ್‌ಗಳ ಹೊಂದಾಣಿಕೆ ಸಮಸ್ಯೆ ಎದುರಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಂ.ಪಿ. ಮುನಿರಾಜು ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್ಚುವರಿ ಜಮೀನು ಹಿಂದಕ್ಕೆ ಪಡೆಯಲು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿತ್ತು. ನೈಸ್‌ ಸಂಸ್ಥೆ ನಮೂದಿಸಿದ ಜಮೀನು 559 ಎಕರೆ ಇದ್ದು, ಸರ್ವೆ ನಂಬರ್‌ಗಳು ಹೊಂದಾಣಿಕೆಯಾಗುತ್ತಿಲ್ಲ. ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಜಮೀನು ಮರಳಿ ಪಡೆದ ನಂತರ ಯಾವ ಉದ್ದೇಶಕ್ಕೆ ಬಳಸಬೇಕು ಎನ್ನುವ ಕುರಿತು ನಿರ್ಧರಿಸಲಾಗುವುದು ಎಂದರು.

ಶಿವಮೊಗ್ಗ ಒಳಚರಂಡಿ 3 ತಿಂಗಳಲ್ಲಿ ಪೂರ್ಣ: ₹115 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಶಿವಮೊಗ್ಗ ನಗರ ಸಮಗ್ರ ಒಳಚರಂಡಿ ಯೋಜನೆಯಲ್ಲಿ ಈಗಾಗಲೇ 254 ಕಿ.ಮೀ ಉದ್ದದ ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಎಂಟು ಕಿ.ಮೀ. ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ಬಿಜೆಪಿಯ ಡಿ.ಎಸ್‌.ಅರುಣ್‌ ಪ್ರಶ್ನೆಗೆ ಉತ್ತರಿಸಿದ ಅವರು, ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆ ಸಂಸ್ಥೆಗೆ ₹27 ಲಕ್ಷ ದಂಡ ವಿಧಿಸಲಾಗಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT