ಬೆಂಗಳೂರು: ನ್ಯಾಯಮೂರ್ತಿ ಬಿ. ಶ್ರೀನಿವಾಸ ಗೌಡ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿ ಎಚ್ಚರಿಕೆ ನೀಡಿದ ನಂತರ ವಿವಿಧ ಕಾಲೇಜುಗಳು ಹೆಚ್ಚುವರಿಯಾಗಿ ಪಡೆದಿದ್ದ 25 ವಿದ್ಯಾರ್ಥಿಗಳ ಶುಲ್ಕವನ್ನು ಹಿಂದಿರುಗಿಸಿವೆ.

ಎಂ.ಬಿ.ಎ, ಎಂ.ಸಿ.ಎ ಮತ್ತು ನರ್ಸಿಂಗ್ ಕೋರ್ಸ್ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೀಟು ಹಂಚಿಕೆ ಮಾಡಿತ್ತು. ನಿಗದಿಗಿಂತ ಹೆಚ್ಚುವರಿಯಾಗಿ ₹55 ಸಾವಿರದಿಂದ ₹4 ಲಕ್ಷ ದವರೆಗೆ ಶುಲ್ಕ ವಸೂಲಿಗೆ ಬೇಡಿಕೆ ಇಟ್ಟಿವೆ ಎಂದು ವಿದ್ಯಾರ್ಥಿಗಳು ಸಮಿತಿಗೆ ದೂರು ಸಲ್ಲಿಸಿದ್ದರು. ದೂರು ಬಂದಿದ್ದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿದ ಸಮಿತಿ, ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು.

ಸಮಿತಿಯ ಸೂಚನೆ ನಂತರವೂ ವಿದ್ಯಾರ್ಥಿಗಳಿಗೆ ಎಂ.ಬಿ.ಎ ಕೋರ್ಸ್ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕದ ಬೇಡಿಕೆ ಇಟ್ಟಿರುವ ಮಾಗಡಿ ರಸ್ತೆಯ ಆಚಾರ್ಯ ಬೆಂಗಳೂರು ಬ್ಯುಸಿನೆಸ್ ಸ್ಕೂಲ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ನ್ಯಾ.ಶ್ರೀನಿವಾಸಗೌಡ ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ತುಮಕೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳು ಕೂಡ ಹೆಚ್ಚುವರಿ ಶುಲ್ಕ ವಸೂಲಿಯ ಬೇಡಿಕೆ ಇಟ್ಟಿದ್ದವು. ಎಚ್ಚರಿಕೆಯ ನಂತರ ಶುಲ್ಕ ಮರಳಿಸಿವೆ.

₹2.12 ಲಕ್ಷ ವಾಪಸ್: ಸಿಇಟಿ ಮೂಲಕ ಸೀಟು ಹಂಚಿಕೆಯಾದ ನಂತರ ಕಾಮೆಡ್- ಕೆ ಸೀಟಿಗೆ ಪಾವತಿಸಿದ್ದ ಶುಲ್ಕ ಹಿಂದಿರುಗಿಸಲು ನಿರಾಕರಿಸಿದ್ದ ಡಾ.ಅಂಬೇಡ್ಕರ್ ಎಂಜಿನಿಯರಿಂಗ್ ಕಾಲೇಜಿನಿಂದ ವಿದ್ಯಾರ್ಥಿನಿಯೊಬ್ಬರಿಗೆ ₹2.12 ಲಕ್ಷ ರೂಪಾಯಿ ಶುಲ್ಕ ಹಿಂದಿರುಗಿಸಿದೆ. ಟಿ. ಜಾನ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಬಿ-ಫಾರ್ಮಾ ಕೋರ್ಸ್ಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಯಿಂದ ಸಂಗ್ರಹಿಸಿದ್ದ ₹50 ಸಾವಿರ ಶುಲ್ಕವನ್ನು ನಿಯಂತ್ರಣ ಸಮಿತಿ ವಾಪಸ್ ಕೊಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.