ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ಈ ಸಿನಿಮಾದಲ್ಲಿ ನಟಿಸಿರುವ ಪಾತ್ರಧಾರಿಗಳನ್ನು ನಟ ಯಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪಾತ್ರಗಳನ್ನು ಪರಿಚಯಿಸುತ್ತಿದ್ದಾರೆ.

ಇದೀಗ ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ಕನ್ನಡದ ನಟ ಬಾಲಾಜಿ ಮನೋಹರ್ ಅವರು ನಟಿಸುತ್ತಿದ್ದಾರೆ. ಭೀರಾ ಪಾತ್ರದಲ್ಲಿ ನಟಿಸಿರುವ ನಟ ಬಾಲಾಜಿ ಮನೋಹರ್ ಅವರ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕಿ ಗೀತು ಮೋಹನ್ದಾಸ್, ‘ನಿಮ್ಮೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಸಂತೋಷ ತಂದಿದೆ. ನಿಮ್ಮ ಸಿನಿಮಾ ಚಿತ್ರೀಕರಣ ಮುಗಿದ ನಂತರವೂ, ನೀವು ಸೆಟ್ನಲ್ಲಿಯೇ ಇದ್ದೀರಿ. ನಾನು ಗಮನಿಸಿದೆ. ಆ ರೀತಿಯ ನಿಷ್ಠೆಯನ್ನು ನಾನು ನಿಮ್ಮಲ್ಲಿ ನೋಡಿದೆ. ನಿಮ್ಮ ಉತ್ಸಾಹ, ಕುತೂಹಲ ಮತ್ತು ಸಲಹೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
.Toxic: ಕನ್ನಡ ಅಲ್ಲ, ಈ ಭಾಷೆಯಲ್ಲಿ ಟಾಕ್ಸಿಕ್ ಟೀಸರ್ಗೆ ಬಂತು ದಾಖಲೆ ವೀಕ್ಷಣೆ.ಯಶ್ ಅವರ ಟಾಕ್ಸಿಕ್ಸ್ನಲ್ಲಿ ಮತ್ತೋರ್ವ ಬಹುಭಾಷಾ ನಟ; ‘ಕರ್ಮಡಿ’ಯಾಗಿ ಸುದೇವ್.
ಈಗಾಗಲೇ ಚಿತ್ರತಂಡ ಮೂವರು ನಟರ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಟೋನಿ ಪಾತ್ರದಲ್ಲಿ ನಟ ಅಕ್ಷಯ್ ಒಬೆರಾಯ್, ಕರ್ಮಾಡಿ ಪಾತ್ರದಲ್ಲಿ ಸುದೇವ್ ನಾಯರ್, ಸಾಲ್ವಡಾರ್ ಆಗಿ ಡಾರೆಲ್ ಡಿಸಿಲ್ವಾ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು, ನಟ ಬಾಲಾಜಿ ಮನೋಹರ್ ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ಅದ್ಭುತ ಅಭಿನಯದ ಮೂಲಕವೇ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಾರೆ. ‘ಲೂಸಿಯಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.