ಸೋಮವಾರದಿಂದ ಪ್ರಕ್ರಿಯೆ ಶುರು
‘ಕಿರು ಆಹಾರ ಸಂಸ್ಕರಣಾ ಉದ್ದಿಮೆ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು. ‘ಉದ್ದಿಮೆ ಸ್ಥಾಪಿಸಿ ಸಹಾಯಧನ ಪಡೆಯಲು 18 ವರ್ಷ ತುಂಬಿರಬೇಕು. ಜಿಲ್ಲಾಸಂಪನ್ಮೂಲ ವ್ಯಕ್ತಿಗಳು ಆಸಕ್ತರಿಗೆ ಡಿಪಿಆರ್ ಸಿದ್ಧಪಡಿಸುವುದರಿಂದ ಹಿಡಿದು ಸಾಲ ಮಂಜೂರಾಗಿ ಸಬ್ಸಿಡಿ ಪಡೆಯುವವರೆಗೆ ನೆರವಾಗಲಿದ್ದಾರೆ’ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ತಿಳಿಸಿದರು. ‘ಮೈಸೂರಿನ ಸಿಎಫ್‌ಟಿಆರ್‌ಐ ಎರಡು ದಿನದ ತರಬೇತಿ ನೀಡಿ ನಂತರ ನಡೆಯುವ ಪರೀಕ್ಷೆಯಲ್ಲಿ ಅರ್ಹರಾದವರನ್ನು ಜಿಲ್ಲಾ ಸಂಪನ್ಮೂಲ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತದೆ. ಐದು ವರ್ಷಗಳಿಂದ 400 ಮಂದಿ ಜಿಲ್ಲಾ ಸಂಪನ್ಮೂಲ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರಸಕ್ತ ವರ್ಷದಲ್ಲಿ 5 ಸಾವಿರ ಫಲಾನುಭವಿಗಳಿಗೆ ನೆರವು ಕಲ್ಪಿಸಬೇಕಾದ ಕಾರಣ ಹೆಚ್ಚುವರಿಯಾಗಿ 150 ಮಂದಿಯನ್ನು ನಿಯೋಜಿಸಿಕೊಳ್ಳಲಾಗುವುದು’ ಎಂದರು.