ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 17ರವರೆಗೆ ವ್ಯಾಪಾರ ಮಾಡಲು ಅನುಮತಿ: ಬಾಗಿಲು ತೆರೆಯಲಿವೆ ಬಾರ್–ಪಬ್‌

Last Updated 9 ಮೇ 2020, 2:16 IST
ಅಕ್ಷರ ಗಾತ್ರ

ಬೆಂಗಳೂರು: ಬಾರ್‌, ಪಬ್‌, ಕ್ಲಬ್‌ ಮತ್ತು ಪ್ರವಾಸೋದ್ಯಮ ಇಲಾಖೆ ಅನುಮೋದಿಸಿರುವ ಹೊಟೇಲ್‌ಗಳಲ್ಲಿ ಮೇ 17ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಎಲ್ಲ ಕಡೆಗಳಲ್ಲಿ ಹಿಂದೆ ಖರೀದಿಸಿ ಖಾಲಿಯಾಗದೆ ಉಳಿದಿರುವ ಭಾರತೀಯ ತಯಾರಿಕೆ ಮದ್ಯ (ಐಎಂಎಲ್‌) ಹಾಗೂ ಬಿಯರ್‌ ಮಾರಾಟಕ್ಕೆ ಶುಕ್ರವಾರದಿಂದಲೇ ಅನುಮತಿ ನೀಡಲಾಗಿದೆ.

ಸಿಎಲ್‌–4, ಸಿಎಲ್‌–7 ಹಾಗೂ ಸಿಎಲ್‌–9 ಪರವಾನಗಿ ಹೊಂದಿದವರು ಮೇ 17ರವರೆಗೆ ಮಾತ್ರ ವಹಿವಾಟು ನಡೆಸಲು ಸಮ್ಮತಿಸಲಾಗಿದ್ದು, ಸೀಲ್‌ ಮಾಡಿರುವ ಬಾಟಲ್ ಮಾರಬೇಕು; ರೆಸ್ಟೊರೆಂಟ್‌ ಹೊಂದಿರುವ ಸನ್ನದುದಾರರು ಪಾರ್ಸಲ್‌ ಮಾತ್ರ ಕೊಡಬೇಕು ಎಂದು ಸೂಚಿಸಲಾಗಿದೆ.ಈ ಆದೇಶ ಕಂಟೇನ್‌ಮೆಂಟ್‌ ವಲಯ‌ಗಳಿಗೆ ಅನ್ವಯಿಸುವುದಿಲ್ಲ.

ದಾಸ್ತಾನು ಮುಗಿದ ಬಳಿಕ ತೆರೆಯಲು ಅಥವಾ ಮೇ 17ರ ನಂತರ ಪಾನೀಯ ನಿಗಮದ ಡಿಪೊಗಳಲ್ಲಿ ಹೊಸದಾಗಿ ಮದ್ಯ ಖರೀದಿಸಲು ಈ ಸನ್ನದುದಾರರಿಗೆ ಅವಕಾಶವಿಲ್ಲ ಎಂದು ಅಬಕಾರಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸದ್ಯದ ಸಂಕಷ್ಟದ ಪರಿಸ್ಥಿತಿ ಅರ್ಥಮಾಡಿಕೊಂಡು ಈ ತೀರ್ಮಾನ ಮಾಡಲಾಗಿದೆ. ಅಲ್ಲದೆ, ಖರ್ಚಾಗದೆ ಉಳಿದಿರುವ ಬಿಯರ್‌ನ‌ ಅವಧಿ ಆರು ತಿಂಗಳಿಗೆ ಮುಗಿಯಲಿದೆ. ಗರಿಷ್ಠ ಚಿಲ್ಲರೆ ಮಾರಾಟ ದರಗಳಲ್ಲೇ (ಎಂಆರ್‌ಪಿ) ಮಾರಬೇಕು ಎಂದು ಷರತ್ತು ವಿಧಿಸಲಾಗಿದೆ.ಎಂಆರ್‌ಪಿಗಿಂತ ಹೆಚ್ಚು ದರಗಳಿಗೆ ಮಾರಾಟ ಮಾಡಿದರೆ ಸನ್ನದು ಅಮಾನತುಗೊಳಿಸಲು/ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಾರ್‌, ಪಬ್‌ ಹಾಗೂ ಹೊಟೇಲ್‌ಗಳು ತಮ್ಮ ದಾಸ್ತಾನನ್ನು ಸಿಎಲ್–2 (ಎಂಆರ್‌ಪಿ) ಮಳಿಗೆಗೂ ಸಾಗಣೆ ಮಾಡಬಹುದಾಗಿದೆ.ಬೆಳಿಗ್ಗೆ 9ರಿಂದ ಸಂಜೆ 7ಗಂಟೆವರೆಗೆ ಮದ್ಯ ಮಾರಾಟ ವಹಿವಾಟು ನಡೆಸಬಹುದಾಗಿದೆ. ಈ ಸ್ಥಳಗಳಲ್ಲಿ ಕೆಲಸ ಮಾಡುವ ನೌಕರರು ಮತ್ತು ಗ್ರಾಹಕರು ಮಾಸ್ಕ್‌ ಧರಿಸಬೇಕು; ಸ್ಯಾನಿಟೈಸರ್‌ ಬಳಸಬೇಕು; ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮಾಲ್‌ ಮತ್ತು ಸೂಪರ್‌ ಮಾರ್ಕೆಟ್‌ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದೂ ಹೇಳಲಾಗಿದೆ.

₹ 149 ಕೋಟಿ ವಹಿವಾಟು
ರಾಜ್ಯದಲ್ಲಿ ಭಾರತೀಯ ತಯಾರಿಕೆ ಮದ್ಯ ಮಾರಾಟ (ಐಎಂಎಲ್‌) ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಶುಕ್ರವಾರ ₹132.5 ಕೋಟಿ ಮೌಲ್ಯದ 25.85 ಲಕ್ಷ ಲೀಟರ್‌ ವ್ಯಾಪಾರವಾಗಿದೆ.

ಬಿಯರ್‌ ಮಾರಾಟದಲ್ಲಿ ಕೊಂಚ ಏರಿಕೆ ಆಗಿದ್ದು₹ 16.5 ಕೋಟಿ ಮೌಲ್ಯದ 7.33 ಲಕ್ಷ ಲೀಟರ್‌ ಖರ್ಚಾಗಿದೆ. ಗುರುವಾರ27.56 ಲಕ್ಷ ಲೀಟರ್‌ ಮದ್ಯ (₹ 152 ಕೋಟಿ) ಮತ್ತು 5.93 ಲಕ್ಷ ಲೀಟರ್‌ ಬಿಯರ್‌ (₹ 13 ಕೋಟಿ) ವ್ಯಾಪಾರ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT