ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಕಾರ್ಯಕ್ರಮದ ನಾಲ್ಕನೇ ಕಂತಿನ ಮೊತ್ತ ₹44.95 ಕೋಟಿ ಬಿಡುಗಡೆ ಮಾಡಲಾಗಿದೆ.

ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ ಉಳಿದ 41,392 ಶಾಲೆಗಳಿಗೆ 2024–25ನೇ ಸಾಲಿನ ಬಾಕಿ ಅನುದಾನ ಹಂಚಿಕೆ ಮಾಡಲಾಗಿದ್ದು, ಕಚೇರಿ ದಾಖಲೆ ಪುಸ್ತಕಗಳು, ಸೀಮೆಸುಣ್ಣ, ಡಸ್ಟರ್, ನೀರಿನ ವ್ಯವಸ್ಥೆ, ದಿನಪತ್ರಿಕೆ ವೆಚ್ಚ, ಪೀಠೋಪಕರಣ ದುರಸ್ತಿ ಸೇರಿದಂತೆ ವಿವಿಧ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಬೇಕು. ಶೇ 10ರಷ್ಟು ಮೊತ್ತವನ್ನು ಶಾಲಾ ಸ್ವಚ್ಛತೆಗೆ ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.