ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಇಟಿ 2024: ರಾಜ್ಯದಲ್ಲಿ ಸುಗಮವಾಗಿ ನಡೆದ ಪರೀಕ್ಷೆ

Published 30 ಜೂನ್ 2024, 16:02 IST
Last Updated 30 ಜೂನ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)– 2024 ಭಾನುವಾರ ಸುಗಮವಾಗಿ ನಡೆಯಿತು. ಬೆಳಿಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆ ನಡೆದವು.

ಬೆಳಿಗ್ಗೆ 381 ಕೇಂದ್ರಗಳಲ್ಲಿ ನಡೆದ ಪರೀಕ್ಷೆ– 1ಕ್ಕೆ 1,02,282 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 90,299 (ಶೇ 88) ಮಂದಿ ಹಾಜರಾದರು. 11,983 ಗೈರಾದರು.

ಮಧ್ಯಾಹ್ನ ನಂತರ 625 ಕೇಂದ್ರಗಳಲ್ಲಿ ನಡೆದ ಪರೀಕ್ಷೆ– 2ಕ್ಕೆ ಅರ್ಜಿ ಸಲ್ಲಿಸಿದ್ದ 1,68,233 ಅಭ್ಯರ್ಥಿಗಳ ಪೈಕಿ, 1,55,167 (ಶೇ 92) ಮಂದಿ ಪರೀಕ್ಷೆಗೆ ಹಾಜರಾದರು. 13,066 ಮಂದಿ ಗೈರಾದರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT