ಶಿರಸಿ: ಕಾರವಾರ- ಜೋಯಿಡಾ ಶಾಸಕ ರಾಗಿದ್ದ ವಸಂತ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮುಂಬೈ ಮೂಲದ ಶಾರ್ಪ್ ಶೂಟರ್ ಸಂಜಯ ಮೋಹಿತೆಗೆ ಜೀವಾವಧಿ ಶಿಕ್ಷೆ ಹಾಗೂ ₹68 ಸಾವಿರ ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ.

2000ರ ಫೆ.19 ರಂದು ಕಾರವಾರ ನಗರದ ದೈವಜ್ಞ ಭವನದ ಎದುರು ಅವರ ಹತ್ಯೆ ನಡೆದಿತ್ತು. ಇನ್ನಿತರ ಆರೋಪಿಗಳಾಗಿದ್ದ ದಿಲೀಪ ನಾಯ್ಕ 2004ರಲ್ಲಿ ಹತ್ಯೆ ಆಗಿದ್ದರು. ಉಳಿದ ಆರೋಪಿಗಳಾದ ಬಾಬು, ಅಂತೋನಿಯನ್ನು ಮುಂಬೈ ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಪರಾಧ ತನಿಖಾ ವಿಭಾಗ (ಸಿಐಡಿ) ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ನ್ಯಾಯಾಧೀಶ ಶಾಂತವೀರ ಶಿವಪ್ಪ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.