17,969 ಎಕರೆ ಒತ್ತುವರಿ
ಸದ್ಯ ವಕ್ಫ್ ಮಂಡಳಿಗೆ ಸೇರಿದ 17,969 ಎಕರೆ ಜಮೀನು ಒತ್ತುವರಿಯಾಗಿದೆ. ಅಂತಹ ಆಸ್ತಿಗಳಲ್ಲಿನ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇರುವ ಮಸೀದಿ, ದರ್ಗಾ, ಈದ್ಗಾ, ಮದರಸಾ ಮತ್ತು ಖಬರಸ್ಥಾನಗಳ ಆಸ್ತಿಗಳ ದಾಖಲೆಗಳನ್ನು ವಕ್ಫ್ ಮಂಡಳಿ ಹೆಸರಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನೂ ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು.