ಬೆಂಗಳೂರು: ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಾಸಕ ಅರವಿಂದ್ ಬೆಲ್ಲದ್ ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನ ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ? ಇದರ ವಿರುದ್ದ ನಿಮ್ಮ ಕ್ರಮವೇನು’ ಎಂದು ಪ್ರಶ್ನಿಸಿದೆ.
‘ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್ನೋಟ್ನಲ್ಲಿ ಸ್ಪಷ್ಟವಾಗಿದೆ. ಬೊಮ್ಮಾಯಿ ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ, ಸಚಿವ ವಿ.ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ, ಶಾಸಕ ಅರವಿಂದ್ ಬೆಲ್ಲದ್ರಿಂದ ಮಹಿಳೆಗೆ ನಿಂದನೆ, ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ?’ ಎಂದು ಕಾಂಗ್ರೆಸ್ ಗುಡುಗಿದೆ.
‘ಶೇ 40 ರಷ್ಟು ಕಮಿಷನ್ ಸರ್ಕಾರದ ರಸ್ತೆ ಗುಂಡಿಗೆ ಒಂದೇ ತಿಂಗಳಲ್ಲಿ ಮೂರನೇ ಬಲಿಯಾಗಿದೆ. ನಿರಂತರ ಸಾವುಗಳಾದರೂ, ಹೈಕೋರ್ಟ್ ಪದೇ ಪದೇ ಚಾಟಿ ಬೀಸಿದರೂ ಎಚ್ಚರವಾಗದ ಈ ಸರ್ಕಾರದ್ದು ಎಮ್ಮೆಗಿಂತಲೂ ದಪ್ಪ ಚರ್ಮ! ಸಿಎಂ, ಸಚಿವರುಗಳು ಮೈಕ್ ಮುಂದೆ ನಿಂತು ಗಂಡಸ್ತನ, ದಮ್ಮು, ತಾಕತ್ತನ್ನು ಮಾತುಗಳಲ್ಲಿ ತೋರುವ ಪೌರುಷ ಆಡಳಿತದಲ್ಲಿ ಇಲ್ಲದಾಗಿರುವುದೇಕೆ’ ಎಂದು ಕಾಂಗ್ರೆಸ್ ಕುಟುಕಿದೆ.
ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
— Karnataka Congress (@INCKarnataka) October 30, 2022
ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್ನೋಟ್ನಲ್ಲಿ ಸ್ಪಷ್ಟವಾಗಿದೆ,@BSBommai ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ?#SayCM
◆ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ
— Karnataka Congress (@INCKarnataka) October 30, 2022
◆ಸಚಿವ ವಿ.ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ
◆ಶಾಸಕ ಅರವಿಂದ್ ಬೆಲ್ಲದ್ರಿಂದ ಮಹಿಳೆಗೆ ನಿಂದನೆ
ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ.@BSBommai ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ?#SayCM
#40PercentSarkara ದ ರಸ್ತೆ ಗುಂಡಿಗೆ ಒಂದೇ ತಿಂಗಳಲ್ಲಿ ಮೂರನೇ ಬಲಿಯಾಗಿದೆ.
— Karnataka Congress (@INCKarnataka) October 30, 2022
ನಿರಂತರ ಸಾವುಗಳಾದರೂ, ಹೈಕೋರ್ಟ್ ಪದೇ ಪದೇ ಚಾಟಿ ಬೀಸಿದರೂ ಎಚ್ಚರಾಗದ ಈ ಸರ್ಕಾರದ್ದು ಎಮ್ಮೆಗಿಂತಲೂ ದಪ್ಪ ಚರ್ಮ!
ಸಿಎಂ, ಸಚಿವರುಗಳು
ಮೈಕ್ ಮುಂದೆ ನಿಂತು ಗಂಡಸ್ತನ, ದಮ್ಮು, ತಾಕತ್ತುಗಳ ಮಾತುಗಳಲ್ಲಿ ತೋರುವ ಪೌರುಷ ಆಡಳಿತದಲ್ಲಿ ಇಲ್ಲದಾಗಿರುವುದೇಕೆ?#SayCM pic.twitter.com/hZtYRsMhBA
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.