ನಾ. ಡಿಸೋಜ ಅವರ ಕೃತಿಗಳನ್ನು ಆಧರಿಸಿ ಸಿನಿಮಾಗಳು ಬಂದಿವೆ. ‘ದ್ವೀಪ’ ಹಾಗೂ ‘ಕಾಡಿನಬೆಂಕಿ’ ಕೃತಿಗಳನ್ನು ಆಧರಿಸಿದ ಅವೇ ಹೆಸರಿನ ಸಿನಿಮಾಗಳಿಗೆ ಪ್ರಶಸ್ತಿಗಳೂ ಹುಡುಕಿಕೊಂಡು ಬಂದಿದ್ದವು. ಅವುಗಳಲ್ಲದೆ ‘ಬಳುವಳಿ’ ಹಾಗೂ ‘ಬೆಟ್ಟದಪುರದ ದಿಟ್ಟ ಮಕ್ಕಳು’, ‘ಆಂತರ್ಯ’ ಅವರ ಸಾಹಿತ್ಯಕೃತಿಗಳನ್ನು ಆಧರಿಸಿ ತಯಾರಾದ ಚಿತ್ರಗಳಾಗಿವೆ.