ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ನೆರವಾದ ಶೂನ್ಯ ಬಡ್ಡಿದರದ ಸಾಲ: ದಿನೇಶ್ ಗೂಳಿಗೌಡ

Published 21 ಜನವರಿ 2024, 16:31 IST
Last Updated 21 ಜನವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ನಾಡಿನ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು ₹15,481 ಕೋಟಿ ಸಾಲ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿದೆ ಎಂದು ಶಾಸಕ ಹಾಗೂ ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಈ ಹಂಗಾಮಿನಲ್ಲಿ ₹24,600 ಕೋಟಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ 19,97,607 ರೈತರಿಗೆ ಬೃಹತ್ ಮೊತ್ತದ ಸಾಲವನ್ನು ರೈತರಿಗೆ ವಿತರಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ₹ 775.49 ಕೋಟಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ರೈತರ ಆಸರೆಗೆ ಸರ್ಕಾರ ನಿಂತಿದೆ ಎಂದಿದ್ದಾರೆ.

ಅಲ್ಪಾವಧಿ ಕೃಷಿ ಸಾಲದಡಿ 19,63,962 ರೈತರಿಗೆ ₹15,031.72 ಕೋಟಿ, ಮಧ್ಯಮಾವಧಿ ಕೃಷಿ ಸಾಲದಡಿ 15,771 ರೈತರಿಗೆ ₹536.35 ಕೋಟಿ ಸಾಲ ವಿತರಿಸಲಾಗಿದೆ. ದೀರ್ಘಾವಧಿ ಕೃಷಿ ಸಾಲದಡಿ 17,873 ರೈತರಿಗೆ ₹273.41 ಕೋಟಿ ಸಾಲ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT