ಮಂಗಳೂರು: ವಿಧವೆಯರು ಗರ್ಭಗುಡಿ ಪ್ರವೇಶಿಸಿ ಗೋಕರ್ಣನಾಥೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಐತಿಹಾಸಿಕ ಕ್ಷಣಕ್ಕೆ ಕುದ್ರೋಳಿ ಕ್ಷೇತ್ರವು ಭಾನುವಾರ ಸಾಕ್ಷಿಯಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ಗಾ್ರಮದ ಇಂದಿರಾ ಶಾಂತಿ ಅವರು ಬ್ರಹ್ಮರ್ಷಿ ನಾರಾಯಣ ಗುರುಗಳಿಂದ ನೂರು ವರ್ಷ ಹಿಂದೆ (1912ರಲ್ಲಿ) ಪ್ರತಿಷ್ಠಾಪನೆ ಯಾದ ಕುದ್ರೋಳಿ ಕ್ಷೇತ್ರದ ಶಿವಲಿಂಗಕ್ಕೆ ಪೂಜೆ ನೆರವೇರಿಸಿದರು. ಈ ಮೂಲಕ, ಪತಿಯನ್ನು ಕಳೆದುಕೊಂಡ ಮಹಿಳೆ ಯರು ಅಮಂಗಳೆಯರು ಎಂಬ ತಲೆ ತಲಾಂತರ ದಿಂದ ಆಚರಣೆ ಯಲ್ಲಿ ರುವ ನಂಬಿಕೆಗೆ ತಿಲಾಂಜಲಿ ಹಾಡಿದರು.

ಬಂಟ್ವಾಳ ತಾಲ್ಲೂಕಿನ ಮೂಡ ಗ್ರಾಮದ ಲಕ್ಷ್ಮೀ ಶಾಂತಿ (ಶಾಂತಿ ಎಂಬುದು ಕುದ್ರೋಳಿ ಕ್ಷೇತ್ರದ ಅರ್ಚಕ ರಿಗೆ ಬಳಸುವ ಹೆಸರು) ಅವರು ಪೂಜಾ ಕಾರ್ಯದಲ್ಲಿ ನೆರವಾದರು. ವಿಧವೆ ಯರಿಬ್ಬರು ಸೇರಿ ಶಿವಲಿಂಗಕ್ಕೆ ಆರತಿ ಬೆಳಗುತ್ತಿದ್ದಾಗ, ಭಕ್ತಿಪರವಶತೆ ಯಿಂದ ಅಲ್ಲಿ ಸೇರಿದ್ದ ವಿಧವೆಯರ ಕಣ್ಣಾಲಿಗಳು ತುಂಬಿ ಬಂದವು. ಕೆಲ ವರಂತೂ ಅಶ್ರು ಬಿಂದುಗಳನ್ನು ಉದು ರಿಸಿ ಗೋಕರ್ಣ ನಾಥೇಶ್ವರನಿಗೆ ಮನಃ ಪೂರ್ವಕ ‘ಅಭಿ ಷೇಕ’ ಮಾಡಿದರು. ಅವರು ನಾರಾ ಯಣ ಗುರು, ಶನೀಶ್ವರ, ಗಣಪತಿ, ಸುಬ್ರ ಹ್ಮಣ್ಯ, ಕಾಲಭೈರವ, ಅನ್ನ ಪೂರ್ಣೇಶ್ವರಿ, ಶ್ರೀಕೃಷ್ಣ, ದತ್ತಾ ತ್ರೇಯ, ಹಾಗೂ ನವಗ್ರಹಗಳು ಮತ್ತು ನವ ರಾತ್ರಿಯ ಪ್ರಯುಕ್ತ ಪ್ರತಿಷ್ಠಾಪಿಸಿದ ನವದುರ್ಗೆ ಯರು ಹಾಗೂ ಶಾರದಾ ಮೂರ್ತಿಗೂ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು.

ಕಾರ್ಯಕ್ರಮದ ರೂವಾರಿಯಾದ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾತನಾಡಿ, ‘ಮಾನವ ರೆಲ್ಲರೂ ಒಂದೇ ಜಾತಿ ಎಂದು ಸಾರಿದ ನಾರಾಯಣ ಗುರುಗಳ ಆಶಯವನ್ನು ಈಡೇರಿಸುವ ಸಲುವಾಗಿ ಪತಿಯನ್ನು ಕಳೆದುಕೊಂಡ ಮಹಿಳೆ ಯರಿಗೂ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ಮತ್ತು ಇತರ ದೇವರಿಗೆ ಅರ್ಚನೆ ಸಲ್ಲಿ ಸಲು ಅವಕಾಶ ಕಲ್ಪಿಸಲಾಗಿದೆ. ದೇವರಿಗೆ ಗಂಡು, ಹೆಣ್ಣು, ವಿಧವೆ ಯರು ಎಂಬ ಬೇಧವಿಲ್ಲ. ಜನ್ಮ ಕೊಟ್ಟ, ಮೊದಲ ಮಾತು ಕಲಿಸಿ ಲಾಲಿಸಿದ ತಾಯಂದಿರು ಪತಿಯನ್ನು ಕಳೆದು ಕೊಂಡಾಗ, ಅವ ರನ್ನು ಅಮಂಗಳೆಯರು ಎಂದು ದೂರ ಇಡುವುದು ಕ್ರೂರ ಪದ್ಧತಿ. ಪ್ರತಿಯೊಬ್ಬ ಮಹಿಳೆ ಯರೂ ಇಂತಹ ಆಚರಣೆಗೆ ತಿಲಾಂಜಲಿ ಹಾಡಲು ಮುಂದಾಗಬೇಕು’ ಎಂದರು.

‘ಕುದ್ರೋಳಿಯಲ್ಲಿ ವಿಧವೆಯರನ್ನು ಕಾಯಂ ಅರ್ಚಕರನ್ನಾಗಿ ನೇಮಿಸಿ ಕೊಂಡಿದ್ದೇವೆ. ದೇಶದಾದ್ಯಂತ ಇರುವ 249 ಗುರುಮಂದಿರಗಳಲ್ಲೂ ವಿಧವೆ ಯರು ಅಥವಾ ಇತರ ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿ ಸುವ ಚಿಂತನೆ ಇದೆ

ಅರ್ಚಕರಾಗುವುದಕ್ಕೆ ಮುಂದೆ ಬಂದರೆ ಅವಕಾಶ ಕಲ್ಪಿಸಲಾಗುತ್ತದೆ. ಬಯಸಿದರೆ, ಪೂಜೆಯ ತರಬೇತಿ ಯನ್ನೂ ನೀಡುತ್ತೇವೆ. ವಿಧವೆಯರು ಮಾತ್ರ ಅಲ್ಲ ಹುಡುಗಿಯರು, ಮದುವೆ ಯಾದ ಮಹಿಳೆಯರು ಅರ್ಚಕರಾಗಲು ಮುಂದೆ ಬಂದರೂ ಜಾತಿ ಧರ್ಮದ ಭೇದ ತೋರದೆ ಮುಕ್ತ ಅವಕಾಶ ಕಲ್ಪಿಸು ತ್ತೇವೆ. ‘ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲೂ ಮಹಿಳಾ ಅರ್ಚಕ ರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗ ಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.