ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ: ಅರಿಶಿಣ ಬೆಳೆಗಾರರು ಕಂಗಾಲು

Last Updated 26 ಫೆಬ್ರುವರಿ 2011, 16:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಶನಿವಾರ ಸುಮಾರು ಮುಕ್ಕಾಲು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಕೆಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆಯಿತು.

ಆದರೆ, ಅಕಾಲಿಕ ಮಳೆಯಿಂದ ಅರಿಶಿಣ  ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರಸ್ತುತ ಬೆಳೆಗಾರರು ಅರಿಶಿಣ ಕಾಟಾವು ಮಾಡಿ ಬೇಯಿಸುತ್ತಿದ್ದಾರೆ. ಅದನ್ನು ಚೆನ್ನಾಗಿ ಒಣಗಿಸಿದ ಬಳಿಕ ಸಂಸ್ಕರಣೆ ಮಾಡಬೇಕಿದೆ. ಆದರೆ, ಏಕಾಏಕಿ ಮಳೆ ಸುರಿಯುತ್ತಿರುವ ಪರಿಣಾಮ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಮಳೆ ಸಿಲುಕಿ ಅರಿಶಿಣ ಕೊಳೆಯುತ್ತದೆ ಎಂಬ ಆತಂಕ ಎದುರಾಗಿದೆ.

ಗ್ರಾಮೀಣ ಪ್ರದೇಶದ ಇಟ್ಟಿಗೆ ತಯಾರಕರಿಗೂ ಮಳೆ ಸಂಕಷ್ಟ ತಂದಿದೆ. ಈರುಳ್ಳಿ ಹಾಗೂ ಹುಣಿಸೆ ಹಣ್ಣು ಕೊಯ್ಲು ಮಾಡುತ್ತಿರುವ ರೈತರು ಸಹ ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT